ಸರ ಅಪಹರಣ
Update: 2017-01-05 22:24 IST
ಕೋಟ, ಜ.5: ವಾಕಿಂಗ್‌ಗೆಂದು ಹೋದ ವೃದ್ಧ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 60,000ರೂ. ವೌಲ್ಯದ 4 ಪವನ್ ತೂಕದ ಎರಡು ಎಳೆಯ ಎರಡು ತಾಳಿ ಇರುವ ಚಿನ್ನದ ಕರಿಮಣಿ ಸರವನ್ನು ಯಾರೋ ಇಬ್ಬರು ಅಪರಿಚತ ಯುವಕರು ಎಳೆದುಕೊಂಡು ಹೋಗಿರುವ ಘಟನೆ ಪಾಂಡೇಶ್ವರ ಗ್ರಾಮ ಸಾಸ್ತಾನದ ಅಗ್ರಹಾರ ರಸ್ತೆಯಲ್ಲಿ ನಿನ್ನೆ ಸಂಜೆ 6:30ರ ಸುಮಾರಿಗೆ ನಡೆದಿದೆ.
ಶ್ರೀಮತಿ ಆಚಾರ್ಯ(60) ಎಂಬವರು ಸಂಜೆ ಚಡಗರ ಅಗ್ರಹಾರ ರಸ್ತೆಯ ಮೂಲಕ ರಾ.ಹೆದ್ದಾರಿಯವರೆಗೆ ವಾಕಿಂಗ್ ಹೋಗಿ ಹಿಂದಿರುಗಿ ಬರುವಾಗ ರಮೇಶ್ ರಾಯರ ಮನೆಯ ಗೇಟ್ ಎದುರು ಇಬ್ಬರು ಯುವಕರು ಬೈಕ್ ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವಂತೆ ನಟಿಸಿ ಅವರ ಸರ ಅಪಹರಿಸಿದ್ದಾಗಿ ಕೋಟ ಠಾಣೆಗೆ ನೀಡಿದ ದೂರಿನಲ್ಲಿ ಶ್ರೀಮತಿ ಆಚಾರ್ಯ ತಿಳಿಸಿದ್ದಾರೆ.