×
Ad

ಗಾಂಜಾ ವ್ಯಾಪಾರಿ ಬಂಧನ

Update: 2017-01-05 22:39 IST

ಬಿ.ಸಿ.ರೋಡು,ಜ.5 : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಅಬ್ದುಲ್ ಲತೀಫ್(22) ಎಂಬಾತನನ್ನು ಇಂದು ಬೆಳಿಗ್ಗೆ 11 ಗಂಟೆಗೆ, ಕೈರಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಗಾಂಜಾ ಮಾರಾಟ ಮಾಡುವ ಸಂದರ್ಭದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತನು ಕತ್ತರಿ ಸಾಣೆ ಮಾಡುತ್ತಾ ಮನೆಮನೆಗೆ ತಿರುಗುತ್ತಾ ಗ್ರಾಮಾಂತರ ಪ್ರದೇಶದ ಜನರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಗ್ರಾಮಾಂತರ ಠಾಣೆಯ ಉಪನಿರ್ದೇಶಕ ರಕ್ಷಿತ್ ಗೌಡ ಮತ್ತು ಅವರ ತಂಡ ಗಸ್ತು ತಿರುಗುತ್ತಿದ್ದ ವೇಳೆ ಆತನ ಮೇಲೆ ಅನುಮಾನ ಉಂಟಾಗಿ ಅವನನ್ನು ಹಿಡಿದು ಬಾಯಿ ಬಿಡಿಸಿದಾಗ ಆತ ನಿಜವನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಜಗದೀಶ್, ಸುರೇಶ್, ಮಾಧವ, ಜನಾರ್ದನ್, ಪ್ರವೀಣ್, ಪುನೀತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆರೋಪಿಯನ್ನು ನ್ಯಾಯಾಲಕ್ಕೆ ಹಾಜರು ಪಡಿಸಿ ಬಂಧನದಲ್ಲಿರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News