ಸಂಸದ ನಳಿನ್ ಜನರ ಕಾಲು ಹಿಡಿದು ಕ್ಷಮೆ ಯಾಚಿಸಲಿ: ಪೂಜಾರಿ
Update: 2017-01-05 23:48 IST
ಮಂಗಳೂರು, ಜ.5: ಸಂಸದ ನಳಿನ್ ಕುಮಾರ್ ಶೆಟ್ಟಿಯವರ ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ ಎಂಬ ಹೇಳಿಕೆಗೆ ಸಂಬಂಸಿದಂತೆ ಕಾನೂನು ಕ್ರಮಕ್ಕೆ ಒಳಪಡಬೇಕಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅವರ ಮಾತಿನಲ್ಲಿ ತಪ್ಪಾಗಿದ್ದರೆ ಜನರ ಕಾಲು ಹಿಡಿದು ಕ್ಷಮೆ ಕೇಳಲಿ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ
ಸಚಿವ ಮಹದೇವ ಪ್ರಸಾದ್ ಅವರ ನಿಧನದಿಂದ ತೆರವಾದ ವಿಧಾನಸಭಾ ಕ್ಷೇತ್ರದಲ್ಲಿ ಮಹದೇವ ಪ್ರಸಾದ್‌ರ ಪತ್ನಿ ಅಥವಾ ಪುತ್ರನಿಗೆ ಸ್ಪರ್ಸಲು ಕಾಂಗ್ರೆಸ್‌ನಿಂದ ಅವಕಾಶ ನೀಡಬೇಕು. ಆಗ ಮಹದೇವಪ್ರಸಾದ್‌ರ ಜನಪರ ಕೆಲಸಗಳು ಮುಂದುವರಿಸಲು ಅನುಕೂಲವಾಗುತ್ತದೆ ಎಂದರು.
ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಕರುಣಾಕರ ಶೆಟ್ಟಿ, ಉಮೇಶ್ಚಂದ್ರ, ಪುರಂದರ ದಾಸ ಕೂಳೂರು ಉಪಸ್ಥಿತರಿದ್ದರು.