ನಾಳೆ ಕಾನ್ಸರ್ಟ್ 4 ಸೈಂಟ್ ಅಲೋಶಿಯಸ್ 17- ಸಂಗೀತ ಕಾರ್ಯಕ್ರಮ

Update: 2017-01-05 18:20 GMT

 ಮಂಗಳೂರು, ಜ.5: ನಗರದ ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಮತ್ತು ಸಾಧನೆಗಳನ್ನು ಸಂಭ್ರಮಿಸಲು ಜ.7ರಂದು ಸಂಜೆ 6 ಗಂಟೆಗೆ ‘ಕಾನ್ಸರ್ಟ್ 4 ಅಲೋಶಿಯಸ್ -17’ ಎಂಬ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾಲೇಜಿನ ಶತಮಾನೋತ್ಸವ ಮೈದಾನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಗುರುಕಿರಣ್, 80ರ ದಶಕದ ಮಂಗಳೂರಿನ ಸಾಂಪ್ರದಾಯಿಕ ರಾಕ್/ಮೆಟಲ್ ಬ್ಯಾಂಡ್ ಲಿವಿನ್, ಮೆಶಿನ್, ರಾಕ್ ರಿವೈವಲ್ ಬ್ಯಾಂಡ್ ಪಾಲ್ಗೊಳ್ಳಲಿವೆ.

ಯುಎಇ ತುಂಬೆ ಸಮೂಹ ಆರೋಗ್ಯ ಸಂಸ್ಥೆಗಳು, ಕೆಇಎಫ್ ಇನ್ಫ್ರಾ ಹಾಗೂ ದ ಯೆನೆಪೊಯ ಗ್ರೂಪ್ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News