ಬಿಜೆಪಿಗೆ ಸೋಲು; ಎಲ್‌ಡಿಎಫ್ ಗೆಲುವು

Update: 2017-01-05 18:23 GMT

ಮಂಜೇಶ್ವರ, ಜ.5: ಮೀಂಜ ಗ್ರಾಪಂನ ಮಜಿಬೈಲ್ ವಾರ್ಡ್‌ಗೆ ನಡೆದ ಉಪಚುನಾವಣೆಯ ಮತ ಎಣಿಕೆ ಗುರುವಾರ ನಡೆದಿದ್ದು, ಎಲ್‌ಡಿಎಫ್  ಅಭ್ಯರ್ಥಿ ಸಿಪಿಐ ಪಿ.ಶಾಂತರಾಮ್ ಶೆಟ್ಟಿ 133 ಮತಗಳ ಬಹುಮತದೊಂದಿಗೆ ಭರ್ಜರಿ ಗೆಲುವು ಸಾಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಚಂದ್ರಹಾಸ ಆಳ್ವ 409 ಮತಗಳನ್ನು ಪಡೆದರೆ ಐಕ್ಯರಂಗ ಅಭ್ಯರ್ಥಿಯಾಗಿ ಸ್ಪರ್ಸಿದ್ದ ಮುಸ್ಲಿಮ್ ಲೀಗ್‌ನ ಹುಸೈನ್ 17 ಮತಗಳನ್ನು ಪಡೆದಿದ್ದಾರೆ.

ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಸಿದ್ದ ಶಾಂತರಾಮ್ ಶೆಟ್ಟಿ 7 ಮತಗಳನ್ನು ಪಡೆದಿದ್ದಾರೆ. ಸದಸ್ಯೆಯಾಗಿದ್ದ ಬಿಜೆಪಿಯ ಯಶೋಧರಾ ಆಳ್ವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News