×
Ad

ವೇಗದ ಅರ್ಧಶತಕ ದಾಖಲಿಸಿದ ವಾರ್ನರ್‌

Update: 2017-01-06 12:34 IST

ಸಿಡ್ನಿ, ಜ.6: ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಮೂರನೆ ಕ್ರಿಕೆಟ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯದ ಆರಂಭಿಕ ದಾಂಡಿಗ ಡೇವಿಡ್‌ ವಾರ್ನರ್‌ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ.
ವಾರ್ನರ್‌ ಮೊದಲ ಇನಿಂಗ್ಸ್‌ನಲ್ಲಿ ಶತಕ(113) ದಾಖಲಿಸಿದ್ದರು. ಎರಡನೆ ಇನಿಂಗ್ಸ್‌ನಲ್ಲಿ 7ಬೌಂಡರಿ ಮತ್ತು 3ಸಿಕ್ಸರ‍್ ಸಹಾಯದಿಂದ ಅರ್ಧಶತಕ ದಾಖಲಿಸಿದರು.  ಆದರೆ ಅವರು 21 ಎಸೆತಗಳಲ್ಲಿ ಅರ್ಧ ದಾಖಲಿಸುತ್ತಿದ್ದರೆ ಪಾಕಿಸ್ತಾನದ ಮಿಸ್ಬಾವುಲ್ ಹಕ್‌ ದಾಖಲೆ ಸರಿಗಟ್ಟುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಮಿಸ್ಬಾ 2014ರಲ್ಲಿ 21ಎಸೆತಗಳಲ್ಲಿ ಅರ್ಧಶತಕ ಗಳಿಸಿ ವಿಶ್ವದಾಖಲೆ ಬರೆದಿದ್ದರು.
ಟೆಸ್ಟ್‌ನ ನಾಲ್ಕನೆ ದಿನವಾಗಿರುವ ಇಂದು ಆಸ್ಟ್ರೇಲಿಯವು ಪಾಕಿಸ್ತಾನದ ಗೆಲುವಿಗೆ 465 ರನ್‌ಗಳ ಸವಾಲು ವಿಧಿಸಿದೆ.           

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News