ಇಂಗ್ಲೆಂಡ್ ವಿರುದ್ಧದ ಸರಣಿಗೆ ತಂಡದ ಆಯ್ಕೆ ವಿಳಂಬ ಸಾಧ್ಯತೆ
Update: 2017-01-06 14:56 IST
ಹೊಸದಿಲ್ಲಿ, ಜ.6: ಇಂಗ್ಲೆಂಡ್ ವಿರುದ್ಧ ಜ.15ರಂದು ಆರಂಭವಾಗಲಿರುವ ಏಕದಿನ ಸರಣಿಗೆ ಟೀಮ್ ಇಂಡಿಯಾದ ಆಯ್ಕೆ ವಿಚಾರದಲ್ಲಿ ಆಯ್ಕೆ ಸಮಿತಿಯು ಗೊಂದಲದಲ್ಲಿ ಸಿಲುಕಿದೆ. ಎಂಎಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯು ತಂಡದ ಆಯ್ಕೆಗೆ ಶುಕ್ರವಾರ ಸಭೆ ಸೇರುವುದೆಂದು ಈ ಮೊದಲು ನಿರ್ಧಾರವಾಗಿತ್ತು.
ಆದರೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ‍್ ಅವರನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ಆಟಗಾರರ ಪಟ್ಟಿಯನ್ನು ಯಾರಿಗೆ ನೀಡಬೇಕೆಂಬ ಗೊಂದಲದಲ್ಲಿದೆ ಆಯ್ಕೆ ಸಮಿತಿ.