×
Ad

ಪಶ್ಚಿಮ ವಲಯ ಐಜಿಪಿ ಅಧಿಕಾರ ಸ್ವೀಕಾರ

Update: 2017-01-06 15:59 IST

ಮಂಗಳೂರು, ಜ.6: ದ.ಕ. ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಾಗಿ ಪಿ.ಹರಿಶೇಖರನ್ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

ಪಶ್ಚಿಮ ವಲಯ ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜೆ.ಅರುಣ್ ಚಕ್ರವರ್ತಿಯವರು ಇಂದು ಹರಿಶೇಖರನ್‌ರಿಗೆ ಅಧಿಕಾರ ಹಸ್ತಾಂತರ ಮಾಡಿದರು ಪಿ.ಹರಿಶೇಖರನ್ ಅವರು ಈ ಹಿಂದೆ ಬೆಂಗಳೂರು ನಗರ (ಪೂರ್ವ ವಲಯ) ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ, ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮಂಗಳೂರು ಪಶ್ಚಿಮ ವಲಯ ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜೆ.ಅರುಣ್ ಚಕ್ರವರ್ತಿಯವರನ್ನು ಬೆಂಗಳೂರಿನ ಆಂತ ರಿಕ ಭದ್ರತಾ ವಿಭಾಗದ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News