×
Ad

ಎಸ್ಸೆಸ್ಸೆಫ್ ಉಪ್ಪಿನಂಗಡಿ ಸೆಕ್ಟರ್ ಮಹಾಸಭೆ

Update: 2017-01-06 16:48 IST

ಉಪ್ಪಿನಂಗಡಿ, ಜ.6: ಎಸ್ಸೆಸ್ಸೆಫ್ ಉಪ್ಪಿನಂಗಡಿ ಸೆಕ್ಟರ್‌ನ ಮಹಾಸಭೆಯು ಡಿವಿಷನ್ ಅಧ್ಯಕ್ಷ ಎನ್.ಎಂ.ಶರೀಫ್ ಸಖಾಫಿ ಅಧ್ಯಕ್ಷತೆಯಲ್ಲಿ ಇಲ್ಲಿನ ಎಂ.ಎಚ್.ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು.

 ಉಪ್ಪಿನಂಗಡಿ ಸೆಕ್ಟರ್ ಮಾಜಿ ಉಪಾಧ್ಯಕ್ಷ ಅಬ್ದುಲ್ ರಝಾಕ್ ಲತೀಫಿ ಕುಂತೂರು ಸಭೆಯನ್ನು ಉದ್ಘಾಟಿಸಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಆದಂ ಮದನಿ ಆತೂರು ವರದಿ ಮತ್ತು ಲೆಕ್ಕ ಪತ್ರ ವಾಚಿಸಿದರು. ಚುನಾವಣಾಧಿಕಾರಿಯಾಗಿ ಆಗಮಿಸಿದ ಡಿವಿಷನ್ ಪ್ರಧಾನ ಕಾರ್ಯದರ್ಶಿ ಅಲಿ ತುರ್ಕಳಿಕೆ ನೇತೃತ್ವದಲ್ಲಿ ನೂತನ ಸಾಲಿಗೆ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಲತೀಫಿ ಕುಂತೂರು, ಉಪಾಧ್ಯಕ್ಷರಾಗಿ ಅಶ್ರಫ್ ಸಅದಿ ಬಿಳಿಯೂರು, ಹಮೀದ್ ಕರುವೇಲು, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಂ ಮಹ್‌ರೂಫ್ ಆತೂರು, ಕೋಶಾಧಿಕಾರಿಯಾಗಿ ಮುಹಮದ್ ಅಶ್ರಫ್ ಕೆ.ಎಸ್.ನೆಕ್ಕರೆ, ಜೊತೆ ಕಾರ್ಯದರ್ಶಿಗಳಾಗಿ ಫಯಾಝ್ ಮಠ, ನೌಶಾದ್ ಕೆಮ್ಮಾರ, ಕ್ಯಾಂಪಸ್‌ಕಾರ್ಯದರ್ಶಿಯಾಗಿ ಮುರ್ಶಿದ್ ಕೆಮ್ಮಾರ ಹಾಗೂ 9 ಮಂದಿ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸೆಕ್ಟರ್ ಮಾಜಿ ಕಾರ್ಯದರ್ಶಿ ಆದಂ ಮದನಿ ಆತೂರು ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಆದಂ ಮದನಿ ಆತೂರು ಸ್ವಾಗತಿಸಿದರು. ಎಂ.ಎಂ.ಆತೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News