×
Ad

ಜ.7ರಂದು ಮೋಂಟುಗೋಳಿ ಸೆಕ್ಟರ್ ಅಸ್ತಿತ್ವಕ್ಕೆ

Update: 2017-01-06 16:50 IST

ಕೊಣಾಜೆ, ಜ.6: ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್‌ನ ನೂತನ ಸೆಕ್ಟರ್ ಆಗಿ ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಜ.7ರಂದು ಸಂಜೆ 7ಕ್ಕೆ ಎಸ್ಸೆಸ್ಸೆಫ್ ಮರಿಕ್ಕಳ ಶಾಖಾ ಕಛೇರಿಯಲ್ಲಿ ನಡೆಯಲಿದೆ.
ಡಿವಿಷನ್ ಅಧ್ಯಕ್ಷ ಉಮರ್ ಅಹ್ಸನಿ ಇನೋಳಿ ಅಧ್ಯಕ್ಷತೆ ವಹಿಸುವರು. ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮರಿಕ್ಕಳ ಜುಮಾ ಮಸ್ಜಿದ್ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ ದುಆ ನೆರವೇರಿಸುವರು. ಡಿವಿಷನ್ ಕೋಶಾಧಿಕಾರಿ ಫಾರೂಕ್ ಸಖಾಫಿ ಮದನಿ ನಗರ, ಡಿವಿಷನ್ ಕಾರ್ಯದರ್ಶಿ ಸೈಯದ್ ಕುಬೈಬ್ ತಂಙಳ್, ಡಿವಿಷನ್ ಉಪಾಧ್ಯಕ್ಷ ಜಮಾಲುದ್ದೀನ್ ಸಖಾಫಿ, ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹೀಂ ಅಹ್ಸನಿ ಮಂಜನಾಡಿ, ಮುಡಿಪು ಸೆಕ್ಟರ್ ಅಧ್ಯಕ್ಷ ಸಿದ್ದೀಖ್ ಸಖಾಫಿ ಕಾಯಾರ್, ಡಿವಿಷನ್ ನಾಯಕರಾದ ಶರೀಫ್ ಮುಡಿಪು, ಮುನೀರ್ ಸಖಾಫಿ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News