ಮಂಗಳೂರು ವಿವಿ ಯಕ್ಷಮಂಗಳ ತಂಡದಿಂದ ಉಜಿರೆಯಲ್ಲಿ ‘ಪಾಂಚಜನ್ಯ’ ಯಕ್ಷಗಾನ ಪ್ರದರ್ಶನ

Update: 2017-01-06 12:14 GMT

ಕೊಣಾಜೆ, ಜ.6 : ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ‘ಯಕ್ಷಮಂಗಳ’ ಸ್ನಾತಕೋತ್ತರ ವಿದ್ಯಾರ್ಥಿ ತಂಡದಿಂದ ಪಾಂಚಜನ್ಯ ಯಕ್ಷಗಾನ ಪ್ರದರ್ಶನವು ಜ.8ರಂದು ಸಂಜೆ 6 ಗಂಟೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನಡೆಯಲಿದೆ.

 ಉಜಿರೆಯ ಶ್ರೀ ಜನಾರ್ದನ ದೇವಸ್ಥಾನ, ಮಿತ್ರಮಂಡಳಿ ಮುಂಡಾಜೆ. ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಇನ್ನಿತರ ಸಹ ಸಂಘಟನೆಗಳ ಸಹಯೋಗದಲ್ಲಿ ಜ.1ರಿಂದ 9ರವರೆಗೆ ಯಕ್ಷನವಮಿ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳಿಂದ ಪಾಂಚಜನ್ಯ ಯಕ್ಷಗಾನ ಪ್ರದರ್ಶನವು ಜ.8ರಂದು ನಡೆಯಲಿದೆ.

ಪಾಂಚಜನ್ಯ ಯಕ್ಷಗಾನ ಪ್ರದರ್ಶನದಲ್ಲಿ ಮಂಗಳೂರು ವಿವಿಧ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳಾದ ವಿನುತಾ ಡಿ, ಶೃತಿ ಎನ್.ಟಿ, ಅಶ್ವಿನಿ, ನಂದಿನಿ, ಸುಶ್ಮಾ, ಪ್ರಸಾದ್, ವಿನುತಾ ಕೆ, ಶಿಲ್ಪಾ, ವಿದ್ಯಾ, ಚಿತ್ರಶ್ರೀ, ಪ್ರವೀಣ ಕೆ, ಸೂರಜ್ ಬೈದ್ಯ, ಶ್ವೇತ, ಸಾಯಿಸುಮ, ಸವಿತಾ ಎಂ, ಸೌಮ್ಯ, ರಾಜೇಶ್ವರಿ ಮೊದಲಾದವರು ಭಾಗವಹಿಸಲಿದ್ದಾರೆ. ಭಾಗವತರಾಗಿ ಪುಂಡಿಕಾ ಗೋಪಾಲಕೃಷ್ಣ ಬಲಿಪ, ಚೆಂಡೆ ಸುದಾಸ್ ಕಾವೂರು, ಮದ್ದಳೆ ದಯಾನಂದ ಮಿಜಾರು, ಚಕ್ರತಾಳ ಕಾರ್ತಿಕ್ ಚಿತ್ರಾಪುರ ಭಾಗವಹಿಸಲಿದ್ದಾರೆ. ಸದಾಶಿವ ಶೆಟ್ಟಿಗಾರ್ ನಿರ್ದೇಶನ ನೀಡಲಿದ್ದು,ದೀವಿತ್ ಕೋಟ್ಯಾನ್, ಶರತ್ ಪೂಜಾರಿ ಸಹ ನಿರ್ದೇಶನ ನೀಡಲಿದ್ದಾರೆ.

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಪ್ರದರ್ಶನವು ಯಕ್ಷಮಂಗಳ ತಂಡದ ಮೂರನೇ ತಿರುಗಾಟದ ಪ್ರದರ್ಶನವಾಗಿದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News