×
Ad

ಪುತ್ತೂರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಮಟ್ಟದ ವಾರ್ಷಿಕ ಮೇಳ

Update: 2017-01-06 18:08 IST

ಪುತ್ತೂರು, ಜ.6 : ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ನಡೆಯಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಮಟ್ಟದ 2 ದಿನಗಳ ವಾರ್ಷಿಕ ಮೇಳದ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು. 

ಮೇಳವನ್ನು ರೋವರ್ ಕಮೀಷನರ್ ಆಗಿರುವ ವಿವೇಕಾನಂದ ಕಾಲೇಜ್‌ನ ನಿವೃತ್ತ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ಅವರು ಉದ್ಘಾಟಿಸಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಇಂತಹ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ತಮ್ಮ ಬದುಕನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ರೆ. ವಿಜಯ ಹಾರ್ವಿನ್ ಮಾತನಾಡಿ , ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ನಡುವೆ ಮನಸು ಕಟ್ಟುವ ಕೆಲಸ ಮಾಡಲು ಪ್ರೇರಣೆಯಾಗಿದೆ. ವೈಯಕ್ತಿಕ ಬದಲಾವಣೆಯೊಂದಿಗೆ ಜಗತ್ತಿಗೆ ಮಾನವೀಯತೆಯನ್ನು ಬಿತ್ತುವ ಮನೋಸ್ಥಿತಿ ನಮ್ಮದಾಗಬೇಕಾಗಿದೆ. ಎಲ್ಲರ ಸಹಕಾರದಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಮೇಳ ಯಶಸ್ವಿಯಾಗಲಿದೆ ಎಂದರು.

ತಾಲೂಕು ನೋಡೆಲ್ ಅಧಿಕಾರಿ ಸುಂದರ ಗೌಡ ಮಾತನಾಡಿ,  ಸ್ವಚ್ಚ ಸಮೃದ್ಧ ಭಾರತ ನಿರ್ಮಿಸುವಲ್ಲಿ, ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಲ್ಲಿ, ಸಾಹಸಮಯ ಬದುಕು ಕಟ್ಟುವಲ್ಲಿ, ವ್ಯಕ್ತಿತ್ವ ವಿಕಸನಗೊಳ್ಳುವಲ್ಲಿ ಹಾಗೂ ಮಾರಕ ಪಿಡುಗುಗಳ ವಿರುದ್ದ ಚಿಂತನೆ ನಡೆಸುವಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಲಿದೆ ಎಂದರು.

ಲಿಟ್ಲ್ ಫ್ಲವರ್ ಶಾಲೆಯ ಮ್ಯಾನೇಜರ್ ಸಿ. ಲೊಯಲಿನ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಅರ್ಚನಾ ಪ್ರಕಾಶ್, ಬೆಥನಿ ಶಾಲಾ ಮುಖ್ಯಗುರು ಸಿ. ಅಮೆರಿಟಾ, ಶಿಕ್ಷಣ ಇಲಾಖೆಯ ಇಸಿಒ ತನುಜಾ, ಸಿಆರ್‌ಪಿ ಶಾಲಿನಿ, ಶಾಲಾ ಮುಖ್ಯಗುರು ಲಿಲ್ಲೀ ಡಿ’ಸೋಜ, ಗೈಡ್ಸ್ ಸಹಾಯಕ ಲೀಡರ್ ಟ್ರೈನರ್ ಸುನಿತಾ ಎಂ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಜ್ಯಪಾಲರಿಂದ ಗೋಲ್ಡನ್ ಆ್ಯರೋ ಅವಾರ್ಡ್ ಗೌರವ ಪದಕ ಪಡೆದ ವಿವೇಕಾನಂದ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳಾದ ಸಂಹಿತಾ ಶರ್ಮ ಮತ್ತು ಚಿನ್ಮಯ್ ಕೃಷ್ಣ ಅವರನ್ನು ಗೌರವಿಸಲಾಯಿತು.
 

ಮೇಳದ ನಾಯಕಿ ಹರೀಣಾಕ್ಷಿ ಮೇಳದ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ತಾಲೂಕಿನ ವಿವಿಧ ಶಾಲೆಗಳ 600 ಸ್ಕೌಟ್ಸ್, ಗೈಡ್ಸ್, ಕಬ್ಸ್, ಬುಲ್‌ಬುಲ್, ರೋವರ್ಸ್‌ ಮತ್ತು ರೇಂಜರ್ಸ್‌ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯಾಧ್ಯಕ್ಷ ಶ್ರೀಧರ್ ರೈ ಸ್ವಾಗತಿಸಿದರು. ಕಾರ್ಯದರ್ಶಿ ವಿದ್ಯಾ ಆರ್ ಗೌರಿ ವಂದಿಸಿದರು. ಶಿಕ್ಷಣ ಬಾಲಕೃಷ್ಣ ಶೆಟ್ಟಿ ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News