×
Ad

ಬಸ್ಸಿನಿಂದ ಬಿದ್ದು ಮಹಿಳೆ ಮೃತ್ಯು

Update: 2017-01-06 21:36 IST

ಕೋಟ, ಜ.6: ಚಾಲಕ ಬಸ್ಸನ್ನು ಒಮ್ಮೆಲೆ ಚಲಾಯಿಸಿದ ಪರಿಣಾಮ ಬಸ್ಸಿನಿಂದ ಇಳಿಯುತ್ತಿದ್ದ ಮಹಿಳೆಯೊಬ್ಬರು ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಐರೋಡಿ ಗ್ರಾಮದ ಅನುಗ್ರಹ ಟೆಕ್ಸ್ಟೈಲ್ ಅಂಗಡಿ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
 

ಮೃತರನ್ನು ಗುಂಡ್ಮಿ ಶೆಟ್ಟಿಗಾರುಬೆಟ್ಟುವಿನ ಕೃಷ್ಣ ಶೆಟ್ಟಿಗಾರ್ ಎಂಬವರ ಪತ್ನಿ ಸಾವಿತ್ರಿ(60) ಎಂದು ಗುರುತಿಸಲಾಗಿದೆ.

ಇವರು ತನ್ನ ಪತಿಯೊಂದಿಗೆ ಪಡುಬಿದ್ರೆಯಲ್ಲಿನ ಸಂಬಂಧಿಕರ ಮದುವೆಗೆ ಹೋಗಿ ವಾಪಾಸು ಉಡುಪಿಯಿಂದ ಸಾಸ್ತಾನಕ್ಕೆ ಖಾಸಗಿ ಬಸ್‌ನಲ್ಲಿ ಬರುತ್ತಿದ್ದು, ಐರೋಡಿಯಲ್ಲಿ ನಿಂತ ಬಸ್‌ನಿಂದ ಸಾವಿತ್ರಿ ಇಳಿಯುತ್ತಿದ್ದಾಗ ಚಾಲಕ ಒಮ್ಮೆಲೆ ಬಸ್ಸನ್ನು ಮುಂದಕ್ಕೆ ಚಲಾಯಿಸಿದನು. ಇದರ ಪರಿಣಾಮ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸಾವಿತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ರಾತ್ರಿ 9ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News