ಟ್ರಾಫಿಕ್ ಪೊಲೀಸರ ಮಿಂಚಿನ ಕಾರ್ಯಾಚರಣೆ ಅನಧೀಕೃತ ಪಾರ್ಕಿಂಗ್‌ಗೆ ದಂಡ, ಎಚ್ಚರಿಕೆಯ ಬಿಸಿ
Update: 2017-01-06 21:58 IST
ಮುಲ್ಕಿ, ಜ.6: ಮುಲ್ಕಿ ಬಸ್ ನಿಲ್ದಾಣದ ಬಳಿ ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವ ಬೈಕ್ ಹಾಗೂ ಬಸ್‌ಗಳ ವಿರುದ್ಧ ಸುರತ್ಕಲ್ ಸಂಚಾರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಹಲವು ವಾಹನ ಸವಾರರಿಗೆ ದಂಡ ವಿಧಿಸಿದ್ದು, ಇನ್ನು ಕೆಲವರಿಗೆ ಎಚ್ಚರಿಕೆಯನ್ನು ನೀಡಿರುವ ಘಟನೆ ಶುಕ್ರವಾರ ಮುಲ್ಕಿಯಲ್ಲಿ ನಡೆದಿದೆ.
ಮುಲ್ಕಿ ಬಸ್ ನಿಲ್ದಾಣದ ಬಳಿಯ ಕೆನರಾಬ್ಯಾಂಕ್ ರಸ್ತೆಯಲ್ಲಿ ಅನಧಿಕೃತವಾಗಿ ನಿಲ್ಲಿಸಿದ್ದ ಬೈಕ್‌ಗಳನ್ನು ಗುರುತಿಸಿ ಬೈಕ್‌ಗೆ ಲಾಕ್ ಅಳವಡಿಸಿದ್ದರು. ಇನ್ನು ಕೆಲವು ಬೈಕ್‌ಗಳಿಗೆ ದಂಡ ಕಟ್ಟುವ ರಶೀದಿಗಳನ್ನು ನೀಡುತ್ತಿದ್ದರು.
ಮುಲ್ಕಿಯಿಂದ ಮಂಗಳೂರು ಕಡೆಗೆ ಹೋಗುವ ಬಸ್‌ಗಳು ಹಾಗೂ ಮೂಡಬಿದ್ರೆ ಕಡೆಗೆ ಹೋಗುವ ಬಸ್ಸುಗಳು ನೂರ್ ಕಾಂಪ್ಲೆಕ್ಸ್ ಬಳಿ ಅನಧಿಕೃತ ಪಾರ್ಕಿಂಗ್ ಮಾಡುತ್ತಿದ್ದರು. ಈ ಬಗ್ಗೆಯೂ ಕ್ರಮ ಕೈಗೊಂಡ ಪೊಲೀಸರು ಬಸ್ ಚಾಲಕರಿಗೆ ಎಚ್ಚರಿಕೆಯ ಬಿಸಿ ಮುಟ್ಟಿಸಿದ್ದಾರೆ.