ಜೂಜು: ಆರು ಮಂದಿ ಬಂಧನ
Update: 2017-01-06 22:31 IST
ಮಂಗಳೂರು,ಜ.6: ಖಚಿತ ಮಾಹಿತಿ ಮೇರೆಗೆ ನಗರ ಬರ್ಕೆ ಠಾಣಾ ಪೊಲೀಸರು ಶುಕ್ರವಾರ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಅಕ್ರಮ ಕೇರಳ ಲಾಟರಿ ಮತ್ತು ಮಟ್ಕಾ ಚೀಟಿ ವ್ಯವಹಾರ ನಿರತ 6 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಉಪ್ಪಳದ ಚಂದ್ರಶೇಖರ ಭಟ್, ಬದಿಯಡ್ಕದ ಕರೀಂ, ಮಂಗಳೂರಿನ ನಿವಾಸಿಗಳಾದ ಶಿವರಾಮ ಶೆಟ್ಟಿ, ರಾಧಾಕೃಷ್ಣ ಪೈ, ಮಂಜು ಹಾಗೂ ಶಿವಾನಂದ ಎಕ್ಕಾರು ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ರೂ. 21,900 ವೌಲ್ಯದ ಕೇರಳ ಲಾಟರಿ ಮತ್ತು ಮಟ್ಕಾ ಚೀಟಿಗಳು ಹಾಗೂ ರೂ. 32,350 ನಗದು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬರ್ಕೆ ಠಾಣಾ ಎಸ್‌ಐ ನರೇಂದ್ರ ಮತ್ತು ತಂಡ ಈ ದಾಳಿ ನಡೆಸಿತ್ತು.
ಈ ಬಗ್ಗೆ ಬರ್ಕೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.