×
Ad

ಸಜೀಪಮುನ್ನೂರು ಗ್ರಾಮ ಸಭೆ

Update: 2017-01-06 23:03 IST

ಬಂಟ್ವಾಳ, ಜ.6 : ಸಜೀಪಮುನ್ನೂರು ಗ್ರಾಮ ಸಭೆ 2016-17 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಮಾರ್ಗದರ್ಶಿ ಅಧಿಕಾರಿ ಶಿಕ್ಷಣ ಇಲಾಖೆಯ ಪ್ರಕಾಶರ ಮಾರ್ಗದರ್ಶನದಲ್ಲಿ ಗ್ರಾ.ಪಂ.ಅಧ್ಯಕ್ಷ ಶರೀಫ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.

 ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ತಾ.ಪಂ.ಸದಸ್ಯೆ ನಸೀಮಾ ಬೇಗಂ, ಗ್ರಾ.ಪಂ.ಸದಸ್ಯರು, ಶಿಕ್ಷಣ, ಆರೋಗ್ಯ, ಕೃಷಿ, ಹೈನುಗಾರಿಕೆ, ಕಂದಾಯ, ಮೆಸ್ಕಾಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

ಶಾರದಾನಗರ ಸ್ಮಶಾನ ಒತ್ತುವರಿ ತೆರವುಗೊಳಿಸಿ ಸಂಪರ್ಕ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಏತ ನಿರಾವರಿ ಯೋಜನೆಯಿಂದ ಕೆಟ್ಟು ಹೋದ ಶಾಂತಿನಗರ ರಸ್ತೆ ದುರಸ್ತಿ ಬಗ್ಗೆ,94 ಸಿಸಿಯಲ್ಲಿ ಮನೆ ನಿವೇಶನ ಯಥಾ ಸ್ಥಿತಿಗೆ ಹಕ್ಕು ಪತ್ರ ನೀಡುವ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಮನಪಾ ಆಯುಕ್ತರು ಈಗಾಗಲೇ ತುಂಬೆ ಡ್ಯಾಂನಲ್ಲಿ 6 ಮೀ.ಎತ್ತರಕ್ಕೆ ಶೀಘ್ರವೇ ನೀರು ಸಂಗ್ರಹಿಸಲಾಗುವುದು ಎಂಬುದಾಗಿ ತಿಳಿಸಿದ್ದು, ಕೇಂದ್ರ ಜಲ ಆಯೋಗ,ವೈಜ್ಞಾನಿಕವಾಗಿ ತಿಳಿಸಿರುವಂತೆ 1 ಮೀ.ಹೆಚ್ಚಾಗಿ ಸ್ವಿಪೇಜ್‌ಎಫೆಕ್ಟ್‌ಏರಿಯಾ ಸೇರಿಸಿ ರೈತರಿಗೆ ಲಿಖಿತ ಸೂಚನೆ ನೀಡಿ ರೈತರ ಸಮಕ್ಷಮ ಸರ್ವೆ ನಡೆಸಿ ಪೂರ್ಣ ಮಾಹಿತಿ ನೀಡಿ ಸೂಕ್ತ ನ್ಯಾಯೋಚಿತ ಪರಿಹಾರ ನೀಡಿದ ಬಳಿಕ ನೀರು ಸಂಗ್ರಹಿಸಬೇಕು ಎಂಬುದಾಗಿ ನಿರ್ಣಯಿಸಲಾಯಿತು.

ಚರ್ಚೆಯಲ್ಲಿ ಎಂಸುಬ್ರಹ್ಮಣ್ಯ ಭಟ್,ಶರತ್,ಸುರೇಶ ಗಟ್ಟಿ,ಪುರುಷೋತ್ತಮ,ಬೇಬಿ,ಪ್ರವೀಣ ಗಟ್ಟಿ,ಮನೋಜ್ ಆಳ್ವ ಮತ್ತಿತರರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News