×
Ad

ಬಂಟ್ವಾಳ : ತೌಹೀದ್ ಶಾಲಾ ವಾರ್ಷಿಕೋತ್ಸವ

Update: 2017-01-06 23:49 IST

ವಿಟ್ಲ ,ಜ.6 : ಬಂಟ್ವಾಳ-ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ಮನಾರುಲ್ ಇಸ್ಲಾಮಿಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತೀಚೆಗೆ ತೌಹೀ್ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕರ್ನಾಟಕದ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್ ಉದ್ಘಾಟಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ನೋಂದಾವಣಾಧಿಕಾರಿ ಎ.ಎಂ. ಖಾನ್ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಸಂಚಾಲಕ ಹಾಜಿ ಮುಹಮ್ಮದ್ ಅಲಿ ಎ.ಆರ್., ಅಧ್ಯಕ್ಷ ಹಾಜಿ ಬಿ.ಎ. ಸುಲೈಮಾನ್, ಕೋಶಾಧಿಕಾರಿ ಮುಹಮ್ಮದ್ ಸಾದಿಕ್ ಬಿ.ಎಚ್.ಬಿ., ಮನಾರುಲ್ ಶಾಲಾ ಮುಖ್ಯ ಶಿಕ್ಷಕಿ ರಮಣಿ, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಬೀರ್ ಅಹ್ಮದ್, ಉಪಾಧ್ಯಕ್ಷ ಮುಹಮ್ಮದ್ ರಫೀಕ್, ಕೋಶಾಧಿಕಾರಿ ಬಿ.ಎಂ. ಇಲ್ಯಾಸ್, ಕ್ರೀಡಾ ಕಾರ್ಯದರ್ಶಿ ಬಿ.ಎಂ. ಬಶೀರ್, ಬಂಟ್ವಾಳ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಅರಬಿ, ಮದ್ರಸ ಮುಖ್ಯೋಪಾಧ್ಯಾಯ ಅಬೂಬಕ್ಕರ್ ಸಿದ್ದೀಕ್ ರಹ್ಮಾನಿ ಬಿ.ಎ., ಮಂಗಳೂರು ವಿಶ್ವವಿದ್ಯಾನಿಲಯ ಸೆನೆಟ್ ಸದಸ್ಯ ರಿಯಾರ್ ಹುಸೈನ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕಗೊಂಡ ಹಾಜಿ ಬಿ.ಎಚ್. ಖಾದರ್ ಅವರನ್ನು ಶಾಲಾಡಳಿತ ವುಂಡಳಿ ವತಿಯಿಂದ ಸನ್ಮಾನಿಸಲಾಯಿತು.

 ಶಾಲಾ ಕಾರ್ಯದರ್ಶಿ ಹಾಜಿ ಬಿ.ಎ. ಮಹಮ್ಮದ್ ಸ್ವಾಗತಿಸಿದರು , ತೌಹೀದ್ ಶಾಲಾ ಮುಖ್ಯ ಶಿಕ್ಷಕಿ ಮೆಟಿಲ್ಡಾ ಡಿಕೋಸ್ತಾ ವರದಿ ವಾಚಿಸಿದರು.

ಕೆ.ಜಿ. ವಿಭಾಗದ ಮುಖ್ಯ ಶಿಕ್ಷಕಿ ಮಮತ ಸುವರ್ಣ ವಂದಿಸಿದರು. ಶಿಕ್ಷಕಿಯರಾದ ನಸೀಮ್ ನೂರ್, ಮೀನಾ, ನಿಶ್ಮಿತ, ಪ್ರೀಮಾ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News