ಬೀದಿ ನಾಯಿ ಕಡಿತ: ಸರಕಾರಿ ಆಸ್ಪತ್ರೆಯಲ್ಲಿ ಲಭಿಸದ ಚಿಕಿತ್ಸೆ

Update: 2017-01-06 18:40 GMT

    ಕಾಸರಗೋಡು, ಜ.6: ಬೀದಿ ನಾಯಿ ಕಡಿತಕ್ಕೊಳಗಾದ ಯುವಕನಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭಿಸದ ಬಗ್ಗೆ ಮಾನವಹಕ್ಕು ಆಯೋಗವು ಆರೋಗ್ಯ ಇಲಾ ಖೆಯ ಕಾರ್ಯದರ್ಶಿ ಮತ್ತು ಜಿಲ್ಲಾಕಾರಿಯಲ್ಲಿ ವರದಿ ಕೇಳಿದೆ.

    ಶುಕ್ರವಾರ ಕಾಸರಗೋಡು ಸರಕಾರಿ ಅತಿಥಿಗೃಹದಲ್ಲಿ ನಡೆದ ರಾಜ್ಯ ಮಾನವ ಹಕ್ಕು ಆಯೋಗದ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಲಭಿಸಿದ ದೂರಿನಂತೆ ಆಯೋಗದ ಸದಸ್ಯ ಕೆ. ಮೋಹನ್ ಕುಮಾರ್ ಈ ಆದೇಶ ನೀಡಿದರು. ಹೊಸದುರ್ಗದ ಎ ಂ. ಚಂದ್ರನ್ ನೀಡಿದ ದೂರಿನಂತೆ ಈ ಕ್ರಮ ತೆಗೆದು ಕೊಂಡಿದ್ದಾರೆ.

  2015ರಲ್ಲಿ ಹೊಸದುರ್ಗದಲ್ಲಿ ಬೀದಿ ನಾಯಿ ಕಡಿತಕ್ಕೊಳಗಾಗಿದ್ದ ಯುವಕ ಜಿಲ್ಲಾ ಸ್ಪತ್ರೆಗೆ ತೆರಳಿದರೂ ಅಲ್ಲಿ ಚಿಕಿತ್ಸೆ ನೀಡದೆ ಪರಿಯಾರಂ ವೈದ್ಯಕೀಯ ಆಸ್ಪತ್ರೆಗೆ ತೆರ ಳುವಂತೆ ಸೂಚಿಸಿದ್ದರೆನ್ನಲಾಗಿದೆ. ಅಲ್ಲಿ 24,000 ರೂ. ಪಾವತಿಸಬೇಕಾಯಿತು.

 ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದ್ದರಿಂದ ದುಬಾರಿ ಹಣ ಪಾವತಿಸಿ ಚಿಕಿತ್ಸೆ ಪಡೆ ಯುವಂತಾಯಿತು. ಚಂದ್ರನ್‌ರಿಗೆ ಆರ್ಥಿಕ ನೆರವು ಲಭಿಸಬೇಕಿದ್ದರೂ ಇದುವರೆಗೂ ಲಭಿಸಿಲ್ಲ. ಚಿಕಿತ್ಸೆ ನಿರಾಕರಣೆ ಮತ್ತು ಆರ್ಥಿಕ ನೆರವು ನೀಡದ ಬಗ್ಗೆ ಸ್ಪಷ್ಟನೆ ನೀಡು ವಂತೆ ಆದೇಶ ಮಾಡಿದ್ದಾರೆ.

 ಅಹವಾಲಿನಲ್ಲಿ ಮೂರು ಹೊಸ ದೂರುಗಳ ಸಹಿತ, 66 ದೂರುಗಳನ್ನು ಪರಿ ಗಣಿಸಿದ್ದು, 18 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News