ಇಂದು ವೈದ್ಯರ ಪ್ರತಿಭಟನಾ ಜಾಥಾ
Update: 2017-01-07 00:16 IST
ಮಂಗಳೂರು, ಜ.6: ಸಂಸದ ಅನಂತಕುಮಾರ್ ಹೆಗಡೆ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಥಳಿಸಿರುವುದನ್ನು ಖಂಡಿಸಿ ಜ.7ರಂದು ಬೆಳಗ್ಗೆ 10ಕ್ಕೆ ಐಎಂಎ ಹಾಲ್‌ನಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ ಜಾಥಾ ನಡೆಸಿ ಜಿಲ್ಲಾಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮಂಗಳೂರಿನ ಅಧ್ಯಕ್ಷ ಡಾ. ರಾಘವೇಂದ್ರ ಭಟ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಂಸದರು ಕರ್ತವ್ಯ ನಿರತ ವೈದ್ಯರು ಹಾಗೂ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿರುವುದು ಅಮಾನವೀಯ ಕೃತ್ಯವಾಗಿದ್ದು, ಭಾರತೀಯ ವೈದ್ಯ ಸಂಘ, ಕೆನರಾ ಆರ್ಥೋಪೆಡಿಕ್ ಸೊಸೈಟಿ ಮತ್ತು ಎಎಂಸಿ ಸಂಘಟನೆಗಳ ಸದಸ್ಯರು ಇದನ್ನು ಖಂಡಿಸಿದ್ದಾರೆ. ಸರಕಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಂಥವರನ್ನು ಬಂಸಬೇಕು ಎಂದವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಕೆ.ಆರ್. ಕಾಮತ್, ಡಾ.ಸತೀಶ್ ಭಟ್, ಸಚ್ಚಿದಾನಂದ ರೈ ಮೊದಲಾದವರು ಉಪಸ್ಥಿತರಿದ್ದರು.