ಕೊಳವೆಬಾವಿ ನಿರ್ಬಂಧ ಸಕ್ಷಮ ಪ್ರಾದಿಕಾರ ಕುರಿತು ವ್ಯಾಪಕ ಚರ್ಚೆ: ಜಿಲ್ಲಾಡಳಿತಕ್ಕೆ ಪತ್ರ

Update: 2017-01-06 18:48 GMT

ಸುಳ್ಯ, ಜ.6: ತಾಪಂ ಪ್ರಗತಿ ಪರಿಶೀಲನಾ ಸಭೆಯು ಸಾಮರ್ಥ್ಯಸೌಧದ ಪಯಸ್ವಿನಿ ಸಭಾಂಗಣದಲ್ಲಿ ಅಧ್ಯಕ್ಷ ಚನಿಯ ಕಲ್ತಡ್ಕ ಸಭೆಯ ಅಧ್ಯಕ್ಷತೆಯಲ್ಲಿ ನಡೆಯಿತು.

ತಾಲೂಕಿನಲ್ಲಿ ಅಕ್ರಮವಾಗಿ ಬೋರ್‌ವೆಲ್ ಕೊರೆಯುವ ಸ್ಥಳಕ್ಕೆ ಪೋಲೀಸರು ಹೋಗಿ ವಾಹನವನ್ನು ಮುಟ್ಟುಗೋಲು ಹಾಕಿದರೂ ಎ್ಐಆರ್ ದಾಖಲಿಸುತ್ತಿಲ್ಲ. ಜಿಲ್ಲಾಮಟ್ಟದ ಸಭೆಯಲ್ಲಿ ಕ್ರಮ ಕೈಗೊಳ್ಳಬೇಕೆಂದು ನಿರ್ಣಯವಾಗಿ ಸುತ್ತೋಲೆಯಿದ್ದರೂ ಪೊಲೀಸ್‌ರಿಗೆ ಕ್ರಮಕೈಗೊಳ್ಳಲು ಅವಕಾಶ ನೀಡಿಲ್ಲವಾದರೆ ಮುಂದಿನ ನಡೆಯ ಕುಳಿತು ಸ್ಪಷ್ಟನೆ ನೀಡುವಂತೆ ಡಿಸಿ, ಎಸ್ಪಿ, ಜಿಪಂ ಸಿಇಒಗೆ ಪತ್ರ ಬರೆದು ಸ್ಪಷ್ಟನೆ ಕೇಳಲು ತಾಪಂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಅಕ್ರಮ ಬೋರ್‌ವೆಲ್ ಕೊರೆಯಬಾರದೆಂದು ಸರಕಾರದ ಆದೇಶ ಇದೆ. ಆದರೂ ಕೆಲವೆಡೆ ಬೋರ್‌ವೆಲ್ ಕೊರೆಯುತ್ತಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಪೋಲೀಸರು ಬಂದು ಬೋರ್‌ವೆಲ್ ಅಗೆತವನ್ನು ನಿಲ್ಲಿಸಿ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆೆ. ಆದರೆ ದೂರು ಕೊಟ್ಟರೂ ಪೋಲೀಸರು ಎ್ಐಆರ್ ದಾಖಲಿಸದೇ ಹಿಂಬರಹ ನೀಡುತ್ತಿದ್ದಾರೆ. ಹೀಗಾದರೆ ಹೇಗೆ? ಪೋಲೀಸರಿಗೆ ಪ್ರಕರಣ ದಾಖಲಿಸುವ ಅಕಾರ ಇಲ್ಲವೇ? ಎಂದು ರಾಧಾಕೃಷ್ಣ ಬೊಳ್ಳೂರು ಸಭೆಯಲ್ಲಿ ಪ್ರಸ್ತಾಪಿಸಿದರು.

ಬೊಳ್ಳೂರುರವರ ಪ್ರಶ್ನೆಗೆ ಪೂರಕವಾಗಿ ಮಾತನಾಡಿದ ಇಒ ಮಧುಕುಮಾರ್, ಬೋರ್‌ವೆಲ್ ಕೊರೆಯಬಾರದೆಂದು ಸರಕಾರಿ ಆದೇಶವಿದೆ. ಮತ್ತೊಂದು ಸುತ್ತೋಲೆಯ ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಬಹುದು. ಆದರೆ ಪಂಚಾಯತ್‌ನವರಿಂದ ನಮಗೆ ದೂರು ಬಂದಾಗ, ನಾವು ಪೋಲೀಸರಿಗೆ ದೂರು ನೀಡಬಹುದು. ಆದರೆ ಪ್ರಕರಣ ದಾಖಲಿಸುವುದು ಅವರೇ ಮಾಡಬೇಕು ಎಂದವರು ಹೇಳಿದರು. ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣಯ್ಯ ಮಾತನಾಡಿ, ಬೆಳ್ಳಾರೆ ವ್ಯಾಪ್ತಿಯಲ್ಲಿ ಬೋರ್‌ವೆಲ್ ಕೊರೆತ ಪ್ರಕರಣ ಬಂದಾಗ ಅಲ್ಲಿಯ ಪಿಎಸ್ಸೆ ಹಿಂಬರಹ ನೀಡಿದ್ದು ಹೌದು. ನಮಗೆ ಯಾವುದೇ ದೂರುಗಳು ಬಂದರೂ ಅದನ್ನು ನಾವು ದಾಖಲಿಸಿಕೊಂಡು ಎ್ಐಆರ್ ಮಾಡಬಹುದು. ಆ ಅಕಾರವೂ ಇದೆ. ಆದರೆ ಇಂತಹ ಕೆಲವು ವಿಚಾರಗಳು ಬಂದಾಗ ನಾವು ಕಾನೂನು ತಜ್ಞರನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಪಡೆದು ಮುಂದುವರಿಯುತ್ತೇವೆ. ಇನ್ನು ಕೆಲವು ಪ್ರಕರಣ ದಾಖಲಿಸಲು ನ್ಯಾಯಾಲಯದಿಂದ ಅನುಮತಿಯನ್ನು ಪಡೆಯುತ್ತೇವೆ ಎಂದು ಹೇಳಿದರು.

ಅವರ ಮಾತಿನಿಂದ ಅಸಮಾಧಾನಗೊಂಡ ರಾಧಾಕೃಷ್ಣರು ಕಾನೂನು ರೀತಿಯಲ್ಲಿ ನೀವು ಆ ರೀತಿ ಮಾತನಾಡುವುದು ಸರಿ. ಆದರೆ ಅದು ಸರಿಯಾದ ಕ್ರಮ ಅಲ್ಲ. ನೀವು ಸೀಝ್ ಮಾಡಿ ಮತ್ತೆ ಹಿಂಬರಹ ಕೊಟ್ಟು ಕ್ರಮಕೈಗೊಳ್ಳದೆ ಬಿಟ್ಟು ಬಿಡುವುದಾದರೆ ಏನು ಪ್ರಯೋಜನ. ಅಕ್ರಮವಾಗಿ ಬೋರ್‌ವೆಲ್ ಮಾಡುವವರು ಮಾಡುತ್ತಾರೆ. ಮತ್ತೆ ನೀವು ಸೀಝ್ ಮಾಡುತ್ತಿರಿ. ಮತ್ತೆ ಬಿಟ್ಟು ಬಿಡುತ್ತೀರಿ ಇದೇ ಮುಂದುವರಿಯುತ್ತದೆ. ಹಾಗಾಗದೇ ಅಕ್ರಮ ಬೋರ್‌ವೆಲ್ ಕೊರೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕಂದಾಯ ಇಲಾಖೆ ಹಾಗೂ ತಾಲೂಕಿನ ಪಂಚಾಯತ್‌ಗಳಲ್ಲಿ ದಾಖಲಾದ ಅಕ್ರಮ ಬೋರ್‌ವೆಲ್ ಪ್ರಕರಣದ ಕುರಿತು ಜಿಲ್ಲಾಕಾರಿಗಳಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಉಪಾಧ್ಯಕ್ಷೆ ಶುಭದಾ ಎಸ್.ರೈ. ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News