×
Ad

ಉಡುಪಿ: ಡಿಎವಿಪಿ ಛಾಯಾಚಿತ್ರ ಪ್ರದರ್ಶನ

Update: 2017-01-07 00:19 IST

ಉಡುಪಿ, ಜ.6: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ (ಡಿಎವಿಪಿ)ದ ಬೆಂಗಳೂರು ಕಚೇರಿಯ ಆಶ್ರಯದಲ್ಲಿ ಉಡುಪಿಯ ಗೀತಾಮಂದಿರದಲ್ಲಿ ಏರ್ಪಡಿಸಲಾಗಿರುವ ‘ನನ್ನ ದೇಶ ಬದಲಾಗುತ್ತಿದೆ.. ಮುಂದೆ ಸಾಗುತ್ತಿದೆ..’ ಎಂಬ ವಿಷಯದ ಕುರಿತಾದ ಛಾಯಾಚಿತ್ರ ಪ್ರದರ್ಶನವನ್ನು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಶುಕ್ರವಾರ ಉದ್ಘಾಟಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವು ಕೇಂದ್ರ ಸರಕಾರದ ಹಲವು ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದ್ದು, ಈ ಛಾಯಾಚಿತ್ರ ಪ್ರದರ್ಶನವು ಜ.6ರಿಂದ 8ರವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ತೆರೆದಿರುತ್ತದೆ.

ಅಲ್ಲದೇ ಪ್ರತಿದಿನ ಸಂಜೆ ಕೇಂದ್ರ ಸರಕಾರದ ಸಂಗೀತ ಮತ್ತು ನಾಟಕ ವಿಭಾಗದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಉಡುಪಿ ಜಿಲ್ಲೆಯ ನಾಗರಿಕರು ಛಾಯಾಚಿತ್ರ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಲ್ಲಿ ಭೇಟಿ ನೀಡಿ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಭಾರತ ಸರಕಾರದ ಕ್ಷೇತ್ರ ಪ್ರದರ್ಶನಾಕಾರಿ ಪಿ.ಜಿ.ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News