×
Ad

ಗೂಡಿನಬಳಿ: ಎಸ್‌ಡಿಪಿ ಕಾರ್ಯಕರ್ತರ ಸಭೆ

Update: 2017-01-07 11:25 IST

ಬಂಟ್ವಾಳ, ಜ.7: ಎಸ್‌ಡಿಪಿ ಗೂಡಿನಬಳಿ ಘಟಕದ ಕಾರ್ಯಕರ್ತರ ಸಭೆಯು ಶುಕ್ರವಾರ ಸಂಜೆ ಪಕ್ಷದ ಕಚೇರಿಯಲ್ಲಿ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ಗೂಡಿನಬಳಿ ಘಟಕ ಅಧ್ಯಕ್ಷ ಶಫೀಉಲ್ಲಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಕ್ಷದ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ, ಇಂದಿನ ರಾಜಕೀಯದ ಅವ್ಯವಸ್ಥೆ ಹಾಗೂ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡಲು ಎಸ್‌ಡಿಪಿಐಯನ್ನು ಬೆಂಬಲಿಸುವಂತೆ ಕರೆ ನೀಡಿದರು.

ಸ್ಥಳೀಯ ಪುರಸಭಾ ಸದಸ್ಯ ಇಕ್ಬಾಲ್ ಐಎಂಆರ್ ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ವಿದಾನಸಭಾ ಅಧ್ಯಕ್ಷ ಶಾಹುಲ್ ಎಸ್.ಎಚ್., ಬಂಟ್ವಾಳ ಪುರಸಭಾ ಕಾರ್ಯದರ್ಶಿ ಇಕ್ಬಾಲ್ ಪರ್ಳಿಯ ಉಪಸ್ಥಿತರಿದ್ದರು. ಫಿರೋಝ್ ಕಾರ್ಯಕ್ರಮ ನಿರೂಪಿಸಿದರು.ಮುಬಾರಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News