×
Ad

ಶರೀಅತ್ ಸಂರಕ್ಷಣಾ ಸಮಾವೇಶ

Update: 2017-01-07 11:33 IST

ಗುರುಪುರ, ಜ.6: ಸುನ್ನೀ ಕೋ ಆರ್ಡಿನೇಶನ್ ಕಮಿಟಿಯ ಆಶ್ರಯದಲ್ಲಿ ಕುಟ್ಪಾಡಿ ಸಿರಾಜುಲ್ ಹುದಾ ಶಿಕ್ಷಣ ಸಂಸ್ಥೆಯ ಬೆಳ್ಳಿಹಬ್ಬದ ಪ್ರಯುಕ್ತ ಶರೀಅತ್ ಸಂರಕ್ಷಣಾ ಸಮಾವೇಶವು ಕೈಕಂಬದ ಮೆಗಾ ಗ್ರೌಂಡ್‌ನಲ್ಲಿ ಇತ್ತೀಚೆಗೆ ನಡೆಯಿತು.

ಸೈಯದ್ ಕಿಲ್ಲೂರು ತಂಙಳ್ ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮವನ್ನು ಎಂಎಸ್ಸೆಮ್ಮೆಂ ಝೈನಿ ಕಾಮಿಲ್ ಉದ್ಘಾಟಿಸಿದರು. ಸಮಸ್ತ ಒಕ್ಕೂಟದ ಜೊತೆ ಕಾರ್ಯದರ್ಶಿ ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು.

ಇದೇ ಸಂದರ್ಭ ಸ್ನೇಹ ಸಂದೇಶ ರ್ಯಾಲಿ ಹಾಗೂ ಶೈಖುನಾ ಪೇರೋಡ್ ಉಸ್ತಾದರನ್ನು ಸನ್ಮಾನಿಸಲಾಯಿತು.

   ವೇದಿಕೆಯಲ್ಲಿ ಶಾಸಕ ಮೊಯ್ದಿನ್ ಬಾವ, ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ, ಪಂಚಾಯತ್ ಸದಸ್ಯ ಝಾಕಿರ್, ಕರ್ನಾಟಕ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಎಚ್.ಐ.ಅಬೂ ಸುಫ್ಯಾನ್ ಮದನಿ, ಎಸ್‌ಇಡಿಸಿ ರಾಜ್ಯಾಧ್ಯಕ್ಷ ಕೆ.ಕೆ.ಎಂ. ಕಾಮಿಲ್ ಸಖಾಫಿ, ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಎಂ.ಪಿ.ಎಂ. ಅಶ್ರಫ್ ಸಅದಿ ಮಲ್ಲೂರು, ಮುಹಮ್ಮದ್ ಅಲಿ ಸಖಾಫಿ, ಇಸ್ಮಾಯಿಲ್ ಸಅದಿ ಕಿನ್ಯಾ, ಸಲಾಹುದ್ದೀನ್ ಸಖಾಫಿ ಮಾಡಂನ್ನೂರು, ಬಿ.ಎಸ್. ಅಬೂಬಕರ್ ಸಅದಿ ಮುಡುಶೆಡ್ಡೆ, ಅಬ್ದುಲ್ ಕರೀಂ ಮದನಿ ವಾಮಂಜೂರು, ಕಾಸಿಂ ಮದನಿ ಮಲ್ಲೂರು, ಅಬ್ಬಾಸ್ ನಿಝಾಮಿ ಎಡಪದವು, ಬದ್ರುದ್ದೀನ್ ಅಝ್‌ಹರಿ ಕೈಕಂಬ , ಶಾಫಿ ಮದನಿ ಕಂದಾವರ , ಹಾಫಿಲ್ ಅಬ್ದುಲ್ ಮಜೀದ್ ಫಾಳ್‌ಲಿ ಗಾಣೆಮಾರ್, ದ.ಕ. ವಕ್ಫ್ ಸಮಿತಿಯ ಸದಸ್ಯರಾದ ಸಲೀಲ್ ಹಾಜಿ ಬಜ್ಪೆ, ಅಬ್ದುಲ್ ಅಝೀಝ್, ಉಸ್ಮಾನ್, ಅಬ್ದುಲ್ ಅಝೀಝ್, ಅಬ್ದುರ್ರಝಾಕ್ ಹಾಜಿ ಗಾಂಧಿನಗರ, ಎಂ.ಅಹ್ಮದ್ ಹಾಜಿ ಅಮಾನುಲ್ಲಾ, ಅಬ್ದುಲ್ ಬಶೀರ್ ಎಡಪದವು, ನಜೀಬ್ ಸಲೀನಾ, ಟಿ.ಎ. ಖಾದರ್ ಹಾಜಿ, ಅಬ್ದುಲ್ ಹಮೀದ್ ಬಂಗ್ಲೆಗುಡ್ಡೆ, ಅಬ್ದುಲ್ ಅಝೀಝ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News