ಕರಾಯ: ರಸ್ತೆ ಅಪಘಾತ; ಒಂದೇ ಕುಟುಂಬದ ನಾಲ್ವರಿಗೆ ಗಾಯ
Update: 2017-01-07 15:11 IST
ಉಪ್ಪಿನಂಗಡಿ, ಜ.7: ಕಾರೊಂದಕ್ಕೆ ಹಾಲು ಸಾಗಾಟದ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕೊಲ್ಲಿ ಎಂಬಲ್ಲಿ ನಡೆದಿದೆ.
ಕಾರಿನಲ್ಲಿದ್ದ ಶೃಂಗೇರಿ ತಾಲೂಕಿನ ಹೆಮ್ಮರಹಳ್ಳಿ ನಿವಾಸಿಗಳಾದ ಶಶಿಕುಮಾರ್, ಅವರ ಪತ್ನಿ ಸುಶ್ಮಿತಾ, ತಂದೆ ಶಂಕರಪ್ಪಹಾಗೂ ತಾಯಿ ಕಮಲಾಕ್ಷಿ ಗಾಯಗೊಂಡವರು. ಈ ಪೈಕಿ ಶಶಿಕುಮಾರ್ ಹಾಗೂ ಕಮಲಾಕ್ಷಿಯವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಶಿಕುಮಾರ್ ಅವರು ಶೃಂಗೇರಿಯಿಂದ ಕುಟುಂಬಸ್ಥರೊಂದಿಗೆ ಸ್ಯಾಂಟ್ರೊ ಕಾರಿನಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅವರಿದ್ದ ಕಾರಿಗೆ ಉಪ್ಪಿನಂಗಡಿಯಿಂದ ಬೆಳ್ತಂಗಡಿಯ ಕೆಯ್ಯೂರಿಗೆ ತೆರಳುತ್ತಿದ್ದ ಹಾಲಿನ ಟ್ಯಾಂಕರ್ ಕರಾಯ ಗ್ರಾಮದ ಕೊಲ್ಲಿ ಎಂಬಲ್ಲಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.