ಮದರಸ ಅಧ್ಯಾಪಕರ ಕೊಠಡಿಯಿಂದ ಸಾವಿರಾರು ರೂಪಾಯಿ ನಗದು ಕಳವು
Update: 2017-01-07 22:32 IST
ಬಂಟ್ವಾಳ, ಜ. 7: ಮದರಸ ಅಧ್ಯಾಪಕರ ಕೊಠಡಿಯೊಳಗೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ನಗದು ದೋಚಿ ಪರಾರಿಯಾದ ಘಟನೆ ಬಿ.ಸಿ.ರೋಡ್ ಸಮೀಪದ ತಲಪಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದಿದೆ.
ಯಾರೂ ಇಲ್ಲದಿದ್ದ ವೇಳೆ ಮಸೀದಿಯಲ್ಲಿರುವ ಮದರಸಾ ಅಧ್ಯಾಪಕರ ಕೊಠಡಿಗೆ ನುಗ್ಗಿದ ಕಳ್ಳರು ಕೊಠಡಿಯಲ್ಲಿಟ್ಟಿದ್ದ ಸದರ್ ಉಸ್ತಾದರಿಗೆ ಸೇರಿದ ಹತ್ತು ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇಶಾ ನಮಾರ್ ಮುಗಿಸಿ ಕೊಠಡಿಗೆ ಸದರ್ ಉಸ್ತಾದ್ ಆಗಮಿಸಿದ್ದ ವೇಳೆ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಕೂಡಲೇ ಅವರು ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಪರಿಶೀಲನೆ ನಡೆಸಿದ ಆಡಳಿತ ಮಂಡಳಿಯರು ಬಳಿಕ ಈ ಬಗ್ಗೆ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.