×
Ad

ಮೆಲ್ಕಾರ್ ಮಹಿಲಾ ಕಾಲೇಜಿನ ಕ್ರೀಡೋತ್ಸವ

Update: 2017-01-07 23:08 IST

ಬಂಟ್ವಾಳ, ಜ.7 :  ಮೆಲ್ಕಾರ್ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಕ್ರೀಡೋತ್ಸವವು ಕಾಲೇಜು ಕ್ರೀಡಾಂಗಣದಲ್ಲಿ  ನಡೆಯಿತು. ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿನಿಯರಿಗೆ ಸರ್ವ ಕ್ರೀಡೆಯನ್ನು ನಡೆಸಲಾಯಿತು.

ಅಂತರಾಷ್ಟ್ರೀಯ ಜೆಒಪಾಲಿಟಿಕ್ಸ್ ಪದವೀಧರರಾದ ಝೋಯ ಅಖ್ತರ್  ಕ್ರೀಡಾ ದಿನವನ್ನು ಶಾಂತಿ ಸಂಕೇತವಾದ ಪಾರಿವಾಳವನ್ನು ಹಾರಿಸುವುದರೊಂದಿಗೆ  ಉದ್ಘಾಟಿಸಿದರು.

 ಮುಖ್ಯ  ಅತಿಥಿಯಾಗಿ ಆಗಮಿಸಿದ ಮನ:ಶಾಸ್ತ್ರ  ಪದವೀಧರೆ ಶ್ರೀಮತಿ ಸಬೀನ ಅಬೂಬಕರ್   ಮನೋ ಶಾಂತಿ ಮತ್ತು ಕ್ರೀಡೆಗೆ ಇರುವ ಸಂಬಂಧ ಹಾಗೂ ಅದರ ಅಗತ್ಯತೆಯನ್ನು ವಿವರಿಸಿದರು.

ಅಧ್ಯಕ್ಷತೆಯನ್ನು ಪ್ರಾಂಶುಪಾಲ ಅಬ್ದುಲ್ ಲತೀಫ್ ವಹಿಸಿದ್ದರು.

 ಕ್ರೀಡಾ  ನಾಯಕಿ ಪ್ರಥಮ ಬಿ. ಎ . ವಿದ್ಯಾರ್ಥಿನಿ ಫಾತಿಮಾ ಕ್ರೀಡಾ ದಿನದ ಪ್ರಮಾಣ ವಚನ ವನ್ನು ನೆರವೇರಿಸಿದರು.

ಅಂತಿಮ ಬಿ. ಕಾಮ್ ನಾಶತ್ ನೀಝ  ಕಾರ್ಯಕ್ರಮ ನಿರೂಪಿಸಿದರು.

ದ್ವಿತೀಯ ವಿಜ್ಞಾನ ವಿಭಾಗದ  ಸನುಫ  ಸ್ವಾಗತಿಸಿದರು.

ಕಾಲೇಜು ನಾಯಕಿ ಅಂತಿಮ ಬಿ.ಎ  ಅಜ್ಮಿಯ  ವಂದಿಸಿದರು.

ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News