×
Ad

ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ

Update: 2017-01-07 23:46 IST

ಕೊಣಾಜೆ, ಜ.7 : ಶಿಕ್ಷಣ ಅಥವಾ ಜ್ಞಾನದ ವಿಸ್ತಾರಕ್ಕೆ ಯಾವುದೇ ಪರಿಮಿತಿ ಇರುವುದಿಲ್ಲ ಅದು ವಿಶಾಲವಾದುದು. ಜ್ಞಾನ ಹಾಗೂ ತಂತ್ರಜ್ಞಾನ, ಕಠಿಣ ಪರಿಶ್ರಮದ ಮೂಲಕ ಮುನ್ನಡೆದರೆ ಜೀವನದಲ್ಲಿ ಯಶಸ್ಸನ್ನು ಗಳಿಸಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಚ್. ಎನ್. ರೆಡ್ಡಿ ಅಭಿಪ್ರಾಯಪಟ್ಟರು.

 ಅವರು ಮಂಗಳೂರು ಕೊಣಾಜೆ ನಡುಪದವಿನ ಪಿ.ಎ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ 2016ನೇ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಭಾಷಣ ಮಾಡುತ್ತಿದ್ದರು.

ವಿದ್ಯಾರ್ಜನೆ ಎಂಬುದು ಒಂದು ನಿರಂತರವಾದ ಪ್ರಕ್ರಿಯೆಯಾಗಿದೆ. ಅಲ್ಲದೆ ಇಂದು ತಂತ್ರಜ್ಞಾನದ ಯುಗವಾಗಿದ್ದು, ಸಂಶೋಧನೆ ಮತ್ತು ನೂತನ ಆವಿಷ್ಕಾರದೊಂದಿಗೆ ಸಮಾಜಕ್ಕೆ ಉಪಯುಕ್ತವಾದ ಕೊಡುಗೆಯನ್ನು ನಾವು ನೀಡುವಂತಾಗಬೇಕು. ಯಾರೊಬ್ಬರ ಜೀವನದಲ್ಲೂ ಯಶಸ್ಸು ಎಂಬುದು ಕೇವಲ ಆಲೋಚನೆಯಿಂದ ಅಥವಾ ಚಿಂತನೆಯಿಂದ ಮಾತ್ರ ಬರುವಂತಹದಲ್ಲ ಅದು ನಮ್ಮ ಕಠಿಣ ಪರಿಶ್ರಮದ ಸಾಧನೆಯಿಂದ ಬರುವಂತಹದ್ದು ಎಂದು ಅವರು ಅಭಿಪ್ರಾಯಪಟ್ಟರು.

 ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅರಣ್ಯ ಸಚಿವ ರಮಾನಾಥ ರೈ , ನಾವು ವಿದ್ಯಾರ್ಥಿ ಜೀವನದಲ್ಲಿ ಪಡೆಯುವ ಜ್ಞಾನ ಮತ್ತು ಕೌಶಲ್ಯ ನಮ್ಮ ಭವಿಷ್ಯಕ್ಕೆ ರೂಪು ನೀಡುವುದರೊಂದಿಗೆ ಉದ್ದೇಶಿತ ಗುರಿಯನ್ನು ಈಡೇರಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲೆ ಉತ್ತಮ ವಿದ್ಯಾಭ್ಯಾಸವನ್ನು ಪಡೆಯುವುದರೊಂದಿಗೆ ಪೋಷಕರ ಆಶಯವನ್ನು ಈಡೇರಿಸಬೇಕು. ನಾವು ಪಡೆಯುವ ಶಿಕ್ಷಣವು ಕೇವಲ ಪದವಿಗಷ್ಟೇ ಸೀಮಿತವಾಗಿರದೆ ನಮ್ಮ ಸಂಸ್ಕಾರಯುತ ಜೀವನಕ್ಕೆ ದಾರಿದೀಪವಾಗಬೇಕಿದೆ. ಈ ನಿಟ್ಟಿನಲ್ಲಿ ಪೋಷಕರ ಜವಬ್ಧಾರಿಯು ಮಹತ್ತರವಾದುದು ಎಂದು ಹೇಳಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್ ,  ನಾವು ವಿದ್ಯಾಭ್ಯಾಸ ಅಥವಾ ಪದವಿಯನ್ನು ಪಡೆದ ಕೂಡಲೇ ಸಮಾಜದಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಲು ಸಾಧ್ಯವಿಲ್ಲ. ನಾವು ಆ ಉನ್ನತ ಹುದ್ದೆಯನ್ನು ಏರಬೇಕಾದರೆ ಅದಕ್ಕೆ ಪರಿಶ್ರಮವೂ ಅಗತ್ಯ. ಇಂತಹ ಪರಿಶ್ರಮದ ಪ್ರಯತ್ನ ನಮ್ಮನ್ನು ಉತ್ತಮ ಭವಿಷ್ಯದೊಂದಿಗೆ ಉದ್ದೇಶವನ್ನು ಈಡೇರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

 ಪಿ.ಎ.ಎಜ್ಯುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಡಾ.ಪಿ.ಎ.ಇಬ್ರಾಹಿಂ ಹಾಜಿ ಅವರು ಸಮಾರಂಭದ ಅಧ್ಯಕ್ಷೆತೆ ವಹಿಸಿ ಮಾತನಾಡಿದರು.

  ದೇರಳಕಟ್ಟೆಯ ಯೇನೆಪೋಯ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ಡಾ. ಸಯ್ಯಿದ್ ಅಖೀಲ್ ಅಹ್ಮದ್, ಮಂಗಳೂರು ವಿವಿ ಪರಿಕ್ಷಾಂಗ ಕುಲಸಚಿವ ಪ್ರೊ.ಎ.ಎಂ. ಖಾನ್, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಡಾ. ಪ್ರಕಾಶ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗ ಮುಖ್ಯ್ಥರು ಡೀನ್‌ಗಳು ಉಪಸ್ಥಿತರಿದ್ದರು.

 ಆಡಳಿತ ನಿರ್ದೇಶಕ ಕೆ.ಎಂ. ಹನೀಫ್, ಹಣಕಾಸು ನಿರ್ದೇಶಕ ಅಹ್ಮದ್ ಕುಟ್ಟಿ, ಅಕಾಡೆಮಿಕ್ ನಿರ್ದೇಶಕ ಪ್ರೊ. ಸರ್ಫರಾಜ್ ಹಾಸಿಂ ಜೆ. , ವಿದ್ಯಾರ್ಥಿ ಕ್ಷೇಮಪಾಲನಾ ನಿದೇರಶಕ ಡಾ. ಎ.ಜೆ.ಆ್ಯಂಟನಿ, ಸಂಶೋಧನಾ ವಿಭಾಗ ಮುಖ್ಯಸ್ಥ ಡಾ. ಝಹೀದ್ ಅನ್ಸಾರಿ, ಎಂಬಿಎ ವಿಭಾಗದ ಡಾ. ಬೀರಮ್ ಮೊವೈದಿನ್ ಬಿ. ಎಂ. , ಸಿವಿಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಪಾಲಾಕ್ಷಪ್ಪ, ಕಂಪ್ಯುಟರ್ ಸೈನ್ಸ್ ವಿಭಾಗ ಮುಖ್ಯಸ್ಥೆ ಪ್ರೊ. ಡಾ. ಶರ್ಮಿಳಾ ಕುಮಾರಿ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥ ಪ್ರೊ. ಅಬ್ದುಲ್ಲ ಗುಬ್ಬಿ, ಪ್ರೊ. ಜಾನ್ ವಾಲ್ಡರ್, ಬಯೋ ಟೆಕ್ನಾಲಜಿ ವಿಭಾಗದ ಡಾ. ಕೃಷ್ಣಪ್ರಸಾದ್ ಎನ್., ಫಿಸಿಕ್ಸ್ ವಿಭಾಗ ಮುಖ್ಯಸ್ಥ ಪ್ರೊ. ಇಸ್ಮಾಯಿಲ್ ಶಾಫಿ ಎ.ಎಂ., ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಡಾ. ಮುಸ್ತಫಾ ಖಲೀಲ್ ಉಪಸ್ಥಿತರಿದ್ದರು. 

 ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ಲ ಇಬ್ರಾಹಿಂ ಸ್ವಾಗತಿಸಿದರು.

ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್ ವರದಿ ವಾಚಿಸಿದರು.

ಪ್ರೊ. ನಬೀಲ್ ಅಹ್ಮದ್ ಹಾಗೂ ಪ್ರೊ. ಫಾತಿಮತ್ ರಹ್ಮಾನ್ ಕಾರ್ಯಕ್ರಮ ನಿರೂಪಿಸಿದರು.

ಉಪ ಪ್ರಾಂಶುಪಾಲ ಡಾ. ರಮೀರ್ ಎಂ.ಕೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News