ಪರ್ಸ್ ಕಳವು: ದೂರು ದಾಖಲು
Update: 2017-01-08 00:17 IST
ಉಪ್ಪಿನಂಗಡಿ, ಜ.7: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಬ್ಯಾಗ್‌ನಿಂದ ಹಣವಿದ್ದ ಪರ್ಸ್ ಕಳವುಗೈದ ಪ್ರಕರಣ ಶನಿವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ಕರಾಯ ಗ್ರಾಮದ ನಿವಾಸಿಯಾಗಿರುವ ಅಬ್ದುಲ್ ಮಜೀದ್ ಎಂಬವರ ಪತ್ನಿ ಮುಸೈಬಾ 25,500 ರೂ. ನಗದು ಇರಿಸಿದ್ದ ಪರ್ಸ್ ಕಳೆದುಕೊಂಡ ಮಹಿಳೆ. ಅವರು ಉಪ್ಪಿನಂಗಡಿಯಿಂದ ಕಕ್ಕೆಪದವು ಎಂಬಲ್ಲಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದಭರ್ ಬಸ್ ನಿರ್ವಾಹಕ ಬಂದು ಟಿಕೆಟ್ ಕೇಳಿದಾಗಲೇ ಪರ್ಸ್ ಕಳ್ಳತನಕ್ಕಿಡಾದ ಬಗ್ಗೆ ತಿಳಿದು ಬಂದಿದೆ.
ಕೂಡಲೇ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರ ಗಮನಕ್ಕೆ ತರಲಾಗಿದ್ದು, ಪ್ರಕರಣ ದಾಖಲಾಗಿದೆ.