ಸಿರಿಯಾದಲ್ಲಿ ಟ್ರಕ್ ಬಾಂಬ್ ದಾಳಿ ; 48 ಸಾವು
Update: 2017-01-08 10:30 IST
ಬೆವೂರತ್, ಜ.8: ಸಿರಿಯಾದ ಅಝಾಝ್ ನಗರದಲ್ಲಿ ಶನಿವಾರ ನಡೆದ ಟ್ಯಾಂಕರ್ ಟ್ರಕ್ ಬಾಂಬ್ ದಾಳಿಯ ಪರಿಣಾಮವಾಗಿ 48 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕ ಮಂದಿ ನಾಗರಿಕರು,ಐವರು ಧಾರ್ಮಿಕ ನ್ಯಾಯಾಧೀಶರು ಸೇರಿದ್ದಾರೆ. ಹಲವು ವಾಹನಗಳು ಬೆಂಕಿಗಾವುತಿಯಾಗಿದೆ ಎಂದು ತಿಳಿದು ಬಂದಿದೆ.
ಸ್ಥಳೀಯ ಇಸ್ಲಾಮಿಕ್ ಕೋರ್ಟ್ ಹೌಸ್ ಪಕ್ಕದ ಮಾರ್ಕೆಟ್ ಪ್ರದೇಶದಲ್ಲಿ ಈ ಬಾಂಬ್ ದಾಳಿ ನಡೆದಿದೆ ಎಂದು ಬ್ರಿಟನ್‌ನಲ್ಲಿರುವ ಸಿರಿಯಾ ಮೂಲದ ಮಾನವ ಹಕ್ಕುಗಳ ವೀಕ್ಷಣಾಲಯದ ಕಾರ್ಯಕರ್ತರೊಬ್ಬರು ಮಾಹಿತಿ ನೀಡಿದ್ದಾರೆ.