×
Ad

ಮರ್ಚಂಟ್ ಯೂತ್ ವಿಂಗ್ ವರ್ಕಾಡಿ ಯುನಿಟ್ ರಚನೆ

Update: 2017-01-08 11:09 IST

ಮಂಜೇಶ್ವರ, ಜ.8: ಮರ್ಚಂಟ್ ಯೂತ್ ವಿಂಗ್ ವರ್ಕಾಡಿ ಯುನಿಟ್  ಸಭೆಯು ವರ್ಕಾಡಿ ಪ್ಯಾಪಾರಿ ಭವನದಲ್ಲಿ ಏಕೋಪನ ಸಮಿತಿ ಅಧ್ಯಕ್ಷ ಉಮ್ಮರ್ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯನ್ನು ಯೂತ್ ವಿಂಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಬ್ಬಾರ್ ಉಪ್ಪಳ ಉದ್ಘಾಟಿಸಿದರು. ಮಂಜೇಶ್ವರ ಯುನಿಟ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ, ಉಪ್ಪಳ ಯುನಿಟ್ ಕಾರ್ಯದರ್ಶಿ ರೈಶಾದ್ ಮಾತನಾಡಿದರು.

ನೂತನ ಯೂತ್ ವಿಂಗ್ ಸಮಿತಿ ಅಧ್ಯಕ್ಷರಾಗಿ ಮನ್ಸೂರ್.ಬಿ.ಎಂ, ಉಪಾಧ್ಯಕ್ಷರಾಗಿ ರಾಜೇಶ್ , ಸಿದ್ದೀಕ್  ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಕೊಳಿಯೂರು  ಜೊತೆ ಕಾರ್ಯದರ್ಶಿಗಳಾಗಿ ಶರೀಫ್ , ರಾಜೇಶ್ , ಕೋಶಾಧಿಕಾರಿಯಾಗಿ ಸಲೀಂ ಎಂಬವರನ್ನು ಆಯ್ಕೆ ಮಾಡಲಾಯಿತು. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ವರ್ಕಾಡಿ ಯುನಿಟ್ ಕಾರ್ಯದರ್ಶಿ ದಿವಾಕರ್.ಎಸ್.ಜೆ ಸ್ವಾಗತಿಸಿದರು. ನೂತನ ಅಧ್ಯಕ್ಷ ಮನ್ಸೂರ್.ಬಿ.ಎಂ ವಂದಿಸಿದರು.

ಜ.12 ರಂದು ಕಾಸರಗೋಡಿನಲ್ಲಿ ನಡೆಯಲಿರುವ ಯೂತ್ ವಿಂಗ್ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News