×
Ad

30 ವರ್ಷ ಮೀರಿದ ಅವಿವಾಹಿತ ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ಟಿಆರ್ ಎಫ್ ನಿಂದ ಸಮೀಕ್ಷೆ

Update: 2017-01-08 12:20 IST

ಮಂಗಳೂರು: ಜ 8, ದ.ಕ ಜಿಲ್ಲೆಯಲ್ಲಿ ಪ್ರಾಯ ಮೂವತ್ತು ಮೀರಿದರೂ ಮದುವೆಯಾಗದೆ ಅನೇಕ ಮುಸ್ಲಿಂ ಯುವತಿಯರು ನಾನಾ ಕಾರಣಗಳಿಂದ ಮದುವೆಯಾಗದೆ ಉಳಿದಿದ್ದಾರೆ.

ಇಂತಹ ಯುವತಿಯರಿಗೆ ಮದುವೆ ನಡೆಸಿಕೊಡುವ ಬಗ್ಗೆ ಯೋಜನೆ ರೂಪಿಸಿ ಕಾರ್ಯಗತಗೊಳಿಸುವುದು ಅವರ ಹೆತ್ತವರ, ಕುಟುಂಬಸ್ಥರ, ಜಮಾಅತರ ಹಾಗೂ ಸಮುದಾಯದ ಜವಾಬ್ದಾರಿಯಾಗಿದೆ. ಈ ದಿಸೆಯಲ್ಲಿ ಚಿಂತಿಸಿ ಕಾರ್ಯಯೋಜನೆ ತಯಾರಿಸುವ ಉದ್ದೇಶದಿಂದ ಮುಸ್ಲಿಂ ಯುವತಿಯರ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದು,  ದ.ಕ ಜಿಲ್ಲೆಯ ಪ್ರತೀ ಜಮಾಅತ್‌ನಲ್ಲಿ ಪ್ರಾಯ 30 ಮೀರಿ ಮದುವೆಯಾಗದಿರುವ ಯುವತಿಯರ ನಿಖರ ಮಾಹಿತಿಯನ್ನು ಜಮಾಅತ್ ಕಮಿಟಿ, ಸಂಘಸಂಸ್ಥೆಗಳು, ಊರವರು ಮತ್ತು ಸಂಬಂಧಪಟ್ಟವರು ನೀಡಿ ಸಹಕರಿಸುವಂತೆ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವಿನಂತಿಸಿದೆ.

ಮಾಹಿತಿಯನ್ನು ಲಿಖಿತವಾಗಿ, ವಾಟ್ಸ್ ಆಪ್, ಇ ಮೇಲ್ ಅಥವಾ ಎಸ್‌ಎಂಎಸ್ ಮೂಲಕ ಸಲ್ಲಿಸಬಹುದು. E mail: trfmangalore@gmail.com :  ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ರಿ) ವಿಶ್ವಾಸ್ ಕ್ರೌನ್, ಕಂಕನಾಡಿ ಮಂಗಳೂರು-2, ಫೋನ್: 0824-4267883, 9972283365, 9901628758

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News