×
Ad

ದೇರಳಕಟ್ಟೆ: ಮದ್ರಸ ಮಕ್ಕಳ ಪ್ರತಿಭಾ ಸಿಂಚನ ಕಾರ್ಯಕ್ರಮ

Update: 2017-01-08 12:55 IST

ಮಂಗಳೂರು, ಜ.8: ತಮ್ಮ ಮಕ್ಕಳಿಗೆ ಪೋಷಕರು ಇಸ್ಲಾಮೀ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಹಾಗಿದ್ದಲ್ಲಿ ಮಾತ್ರ  ಮೋಕ್ಷ ಸಿಗಲು ಸಾಧ್ಯ ಎಂದು ಸಲಫಿ ಎಜುಕೇಶನ್ ಬೋರ್ಡ್ ಅಧ್ಯಕ್ಷ ಮೌಲವಿ ಮುಸ್ತಫಾ ದಾರಿಮಿ ಅಭಿಪ್ರಾಯಪಟ್ಟರು.

ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಮಂಗಳೂರು ಇದರ ಅಂಗ ಸಂಸ್ಥೆಯಾದ ಸಲಫಿ ಎಜುಕೇಶನ್ ಬೋರ್ಡ್ ನ ಅಧೀನದಲ್ಲಿರುವ ದೇರಳಕಟ್ಟೆ ಇಸ್ಲಾಹಿಯ್ಯಾ ಮದ್ರಸ ಮಕ್ಕಳ ಪ್ರತಿಭಾ ಸಿಂಚನ(ಇಲ್ಫತ್) ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಮದ್ರಸ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟರು. ಮೌಲವಿ ಅಬ್ದುರ್ರವೂಫ್ ಮದನಿ ಮುಖ್ಯ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ  ದೇರಳಕಟ್ಟೆ ಸಲಫಿ ಮಸೀದಿಯ ಖತೀಬ್ ಅಬೂ ನಜೀಬ್ ಸ್ವಲಾಹಿ, ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈಯನ್ಸ್ ಪ್ರಾಂಶುಪಾಲ ಪ್ರೊ.ಇಕ್ಬಾಲ್ ಅಹ್ಮದ್ ಯು.ಟಿ. ಭಾಗವಹಿಸಿದ್ದರು.

ಸಲಫಿ ಎಜುಕೇಶನ್ ಬೋರ್ಡ್ ಕಾರ್ಯದರ್ಶಿ ಅಬೂಬಿಲಾಲ್ ಎಸ್.ಎಂರು ಎಸ್.ಇ.ಬಿಯ ನಿಯಮ ನಿರ್ದೇಶನಗಳ ಕುರಿತು ವಿವರಿಸಿದರು.
ಎಸ್.ಕೆ.ಎಸ್.ಎಮ್ ದೇರಳಕಟ್ಟೆ ಘಟಕದ ಅಧ್ಯಕ್ಷ ಡಿ. ಮುಹಮ್ಮದ್ ಯಾಸೀನ್, ಪದಾಧಿಕಾರಿಗಳು, ಮಲಾರ್ ಸಲಫಿ ಮಸೀದಿಯ ಖತೀಬರಾದ ಎಮ್. ನಜಾತಿ, ಮದ್ರಸ ಶಿಕ್ಷಕ ಶಿಕ್ಷಕಿಯರು ಮತ್ತಿತರರು ಉಪಸ್ಥಿತರಿದ್ದರು. ಮದ್ರಸದ ಸದ್ರ್ ಮುದರ್ರಿಸ್ ಸಿರಾಜ್ ತಲಪಾಡಿ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ಅಹ್ಮದ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಕೆ.ಎಸ್.ಎಮ್ ಕೇಂದ್ರ ಸಮಿತಿ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News