×
Ad

ಇರುವೈಲಿನಲ್ಲಿ ಆಳ್ವಾಸ್ ವಿದ್ಯಾರ್ಥಿಗಳಿಂದ ಜಲ-ನೆಲ ಸಂರಕ್ಷಣೆ

Update: 2017-01-08 15:33 IST

ಮೂಡುಬಿದಿರೆ, ಜ.8: ಕೃಷಿ-ಅಂತರ್ಜಲ ಅಭಿವೃದ್ಧಿಗಾಗಿ ಆಳ್ವಾಸ್ ಪದವಿ ಕಾಲೇಜಿನ ಮಾನವಿಕ ವಿಭಾಗದ ಸುಮಾರು 50 ವಿದ್ಯಾರ್ಥಿಗಳು ಇರುವೈಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಒಡ್ಡುಗಳನ್ನು ನಿರ್ಮಿಸುವ ಮೂಲಕ ನೆಲ ಜಲ ಸಂರಕ್ಷಣೆಯ ಅಭಿಯಾನವನ್ನು ಶನಿವಾರ ಹಮ್ಮಿಕೊಂಡರು.  

ಆಳ್ವಾಸ್ ಕಾಲೇಜಿನ ಕಲಾ ವಿಭಾಗದ ಡೀನ್ ಸಂಧ್ಯಾ ಕೆ.ಎಸ್, ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಚಂದ್ರಶೇಖರ್ ಮಯ್ಯ, ಅರ್ಥಶಾಸ್ತ್ರ ಉಪನ್ಯಾಸಕ ಎಂ.ಕೆ.ರವಿಂದ್ರ, ಅರ್ಥಶಾಸ್ತ್ರ ಉಪನ್ಯಾಸಕ, ಎನ್ನೆಸ್ಸೆಸ್ ಅಧಿಕಾರಿ ಎನ್.ಗುರುದೇವ್, ರಾಜ್ಯಶಾಸ್ತ್ರ ಉಪನ್ಯಾಸಕಿ ದಿವ್ಯಾ, ಆಳ್ವಾಸ್ ಪದವಿ ಕಾಲೇಜಿನ ಕಲಾವಿಭಾಗದ ವಿದ್ಯಾರ್ಥಿಗಳು, ಎನ್ನೆಸ್ಸೆಸ್ ಘಟಕದ ಸದಸ್ಯರು ಪಾಲ್ಗೊಂಡರು. ರಾಜೇಶ್ವರಿ ಇನ್ಫ್ರಾಟೆಕ್‌ನ ಆಡಳಿತ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಒಡ್ಡು ನಿರ್ಮಾಣಕ್ಕೆ 400 ಸಿಮೆಂಟ್‌ನ ಚೀಲಗಳನ್ನು ನೀಡಿದರು. ಈ ಅಭಿಯಾನಕ್ಕೆ ಪೂರಕವಾದ ವ್ಯವಸ್ಥೆಗಳನ್ನು ನೀಡಿ  ದಿನೇಶ್ ಶೆಟ್ಟಿ ಸಹಕರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News