×
Ad

ಆಳ್ವಾಸ್‌ನಲ್ಲಿ ‘ರಿನೈಸನ್’ ಸಮಾವೇಶ

Update: 2017-01-08 17:03 IST

ಮೂಡುಬಿದಿರೆ , ಜ. 8 : ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಆಶ್ರಯದಲ್ಲಿ ಭಾರತೀಯ ಹೋಮಿಯೋಪಥಿ ಸಂಘದ ಸಹಯೋಗದೊಂದಿಗೆ ‘ರಿನೈಸನ್’ ದಕ್ಷಿಣ ಭಾರತ ಮಟ್ಟದ ಹೋಮಿಯೋಥಿ ಸಮಾವೇಶ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಕೇಂದ್ರಿಯ ಹೋಮಿಯೋಪಥಿ ಕೌನ್ಸಿಲ್ ಸದಸ್ಯ ಡಾ.ಶ್ರೀಕಾಂತ್ ಕೊಂಕಣಿ ಸಮಾವೇಶಕ್ಕೆ ಚಾಲನೆ ನೀಡಿ,ಹೋಮಿಯೋಥಿ ಪದ್ಧತಿಯಲ್ಲಿ ಗುಣಮಟ್ಟದ ಉನ್ನತಿಗೆ ಈ ಕ್ಷೇತ್ರದಲ್ಲಿರುವ ತಜ್ಞರು, ವೈದ್ಯರು ಮುಖ್ಯವಾಗಿ ವಿದ್ಯಾರ್ಥಿಗಳ ಶ್ರಮಿಸಬೇಕು. ಹೋಮಿಯೋಥಿ ವಿಧ್ಯಾಭ್ಯಾಸದ ಸಂದರ್ಭದಲ್ಲಿ ಪಡೆದ ಜ್ಞಾನವನ್ನು ಪ್ರಾಯೋಗಿಕ ಹಂತದಲ್ಲಿ ಸಮರ್ಥವಾಗಿ ಉಪಯೋಗಿಸಬೇಕು. ಮಹಿಳೆಯರು ಹೋಮಿಯೋಥಿ ವಿಧ್ಯಾಬ್ಯಾಸ ಮಾತ್ರ ಪಡೆಯುವುದಲ್ಲ ಅದರ ಜೊತೆಗೆ ಪ್ರಾಕ್ಟಿಸ್ ಮಾಡುವಲ್ಲಿಯೂ ಮುಂದಾಗಬೇಕು ಎಂದರು.

ಭಾರತೀಯ ಹೋಮಿಯೋಪಥಿ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಡಾ.ಸುಧಿನ್ ಕುಮಾರ್ ಮಾತನಾಡಿ, ಭಾರತದ ಶೇ.40ರಷ್ಟು ಜನ ಪ್ರಾಥಮಿಕ ಆರೋಗ್ಯಕ್ಕೆ ಹೋಮಿಯೋಪಥಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ದೇಶದಲ್ಲಿ ಎರಡುವರೆ ಲಕ್ಷದಷ್ಟು ಮಂದಿ ಹೋಮಿಯೋಪಥಿ ವೈದ್ಯರು, ಪಿಜಿ ಕೇಂದ್ರವನ್ನು ಒಳಗೊಂಡತೆ 170 ಹೋಮಿಯೋಪಥಿ ವಿದ್ಯಾಲಯಗಳು, ಹೆಚ್ಚಿನ ಸಂಖ್ಯೆಯ ಫಾರ್ಮಸಿಗಳು ದೇಶದಲ್ಲಿದ್ದು, ಇತರ ದೇಶಗಳಿಗಿಂತ ಭಾರತ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದೆ. ಜಗತ್ತಿನ ಮಾನ್ಯತೆ ಹಾಗೂ ಮೆಚ್ಚುಗೆಗೆ ಪಾತ್ರವಾಗಿದೆ. ವಿದ್ಯಾರ್ಥಿಗಳಿಗೆ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿ, ರಾಜ್ಯಮಟ್ಟದ ಹೋಮಿಯೋಪಥಿಕ್ ಸಮಾವೇಶದ ವಿಚಾರ ಮಂಡನೆಯ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಪರ್ಯಾಯ ಔಷಧಿ ಪದ್ಧತಿ ಬಳಕೆ ಹೆಚ್ಚಾಗಬೇಕು. ಕಡಿಮೆ ಖರ್ಚು ಹಾಗೂ ಕಡಿಮೆ ಔಷಧಿಯಿಂದ ಕಾಯಿಲೆಗಳನ್ನು ಗುಣಪಡಿಸಬಹುದಾದ ಹೊಮೀಯೋಪತಿ ಪದ್ಧತಿಯಲ್ಲಿ ಅಪ್‌ಗ್ರೇಡ್ ಆಗಲು ಹಲವಾರು ಅವಕಾಶಗಳಿವೆ. ಅನ್ಯ ಕ್ಷೇತ್ರದಲ್ಲಿ ಈ ಕ್ಷೇತ್ರ ವ್ಯಾಪಿಸುವುದಕ್ಕಿಂತ ಈ ಕ್ಷೇತ್ರಕ್ಕೆ ಸಂಬಂಧಪಟ್ಟವರೇ ಜಾಗೃತರಾಗಿ ಹೋಮಿಯೋಥಿಯ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಬೇಕು. ಮುಂದಿನ ವರ್ಷ ಮೇ ತಿಂಗಳಲ್ಲಿ ‘ಆಯುಷ್’ಗೆ ಸಂಬಂಧಪಟ್ಟಂತೆ ಬೃಹತ್ ಸಮ್ಮೇಳನವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದದ ನೇತೃತ್ವದಲ್ಲಿ ಮಾಡಲಿದ್ದೇವೆ. 3 ದಿನಗಳ ಕಾಲ ಕ್ಷೇತ್ರದ ಬಗ್ಗೆ ಸೂಕ್ತ ರೀತಿಯ ಚಿಂತನ-ಮಂಥನ ನಡೆಯಲಿದೆ ಎಂದು ಹೇಳಿದರು.

ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ, ಸಮಾವೇಶದ ಅಧ್ಯಕ್ಷ ಡಾ.ಪ್ರವೀಣ್ ರಾಜ್ ಸ್ವಾಗತಿಸಿದರು. ಆಯೀಷಾ ತಶ್ವ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಡಾ.ರಾಖಾಲ್.ಪಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News