ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ ಅಂತರ್ ಕಾಲೇಜು ಐಟಿ ಫೆಸ್ಟ್ ’ಪಿನ್ಯಾಕಲ್-2017’
ಪುತ್ತೂರು, ಜ.8 : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಜ.12ರಂದು ಅಂತರ್ ಕಾಲೇಜು ಐಟಿ ಫೆಸ್ಟ್ ’ಪಿನ್ಯಾಕಲ್-2017’ ಸ್ಪರ್ಧಾ ಕಾರ್ಯಕ್ರಮ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆಯಲಿದೆ.
ಜ.12ರಂದು ಪೂರ್ವಾಹ್ನ ಬೆಂಗಳೂರಿನ ಚಾನೆಲ್ ಬ್ರಿಡ್ಜ್ ಸಾಫ್ಟ್‌ವೇರ್ ಲ್ಯಾಬ್ಸ್‌ನ ಸಾಫ್ಟ್‌ವೇರ್ ಡೆವಲಪರ್ ಜೀವನ್ ಕೆ ಎ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದು, ಕಾಲೇಜಿನ ಸಂಚಾಲಕ ಅತಿ ವಂ. ಆಲ್ಫ್ರೆಡ್ ಜೆ ಪಿಂಟೊ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ ಬಹುಮಾನ ವಿತರಣಾ ಸಮಾರಂಭ ನಡೆಯುವುದು. ತೀರ್ಥಹಳ್ಳಿಯ ಮುತ್ತೂಟ್ ಫೈನಾನ್ಸ್‌ನ ಶಾಖಾ ಪ್ರಬಂಧಕ ರವಿರಾಜ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೊ ನೊರೊನ್ಹ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ ಮತ್ತು ಕಾಲೇಜಿನ ಐಟಿ ಕ್ಲಬ್ ಸಂಯೋಜಕಿ ರಾಜೇಶ್ವರಿ ಎಂ ಅವರ ಸಂಯೋಜನೆಯಲ್ಲಿ ಈ ಸ್ಫರ್ಧೆಗಳು ನಡೆಯುವುದು.
ವಿದ್ಯಾರ್ಥಿಗಳಲ್ಲಿರುವ ಕೌಶಲ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ವಿವಿಧ ಸ್ಪರ್ಧೆಗಳಾದ ಪ್ರೋಡಕ್ಟ್ ಲಾಂಚ್, ಟ್ರಜರ್ ಹಂಟ್, ವೆಬ್ ಕೋಡ್, ಪೋಸ್ಟರ್ ಪ್ರೆಸೆಂಟೇಶನ್, ಐಟಿ ಮ್ಯಾನೆಜರ್, ಐಟಿ ಕ್ವಿಜ್, ಪೇಪರ್ ಪ್ರೆಸೆಂಟೇಶನ್, ಕೊಲಾಜ್, ಗೇಮಿಂಗ್, ಡಾನ್ಸ್ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಂಗಳೂರು ವಿವಿ ವ್ಯಾಪ್ತಿಗೆ ಒಳಪಡುವ ವಿವಿಧ ಕಾಲೇಜುಗಳಿಂದ ಗಣಕ ವಿಜ್ಞಾನ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಈ ಸ್ಫರ್ಧೆಯಲ್ಲಿ ಭಾಗವಹಿಸುವರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.