ತೆಂಗಿನ ಮರದಿಂದ ಬಿದ್ದು ಮೃತ್ಯು
Update: 2017-01-08 17:31 IST
ಪುತ್ತೂರು, ಜ.8 : ತೆಂಗಿನ ಕಾಯಿ ಕೀಳಲೆಂದು ತೆಂಗಿನ ಮರಕ್ಕೆ ಹತ್ತಿದ ಕೂಲಿ ಕಾರ್ಮಿಕ ವ್ಯಕ್ತಿಯೋರ್ವರು ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಅರಿಯಡ್ಕ ಗ್ರಾಮದ ಗೋಳ್ತಿಲ ಎಂಬಲ್ಲಿ ರವಿವಾರ ನಡೆದಿದೆ.
ಇಲ್ಲಿನ ಮಜ್ಜಾರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಪೂಜಾರಿಯಾಗಿದ್ದ ಗೋಳ್ತಿಲ ನಿವಾಸಿ ಚಂದ್ರ ಮಣಿಯಾಣಿ (45) ಮೃತಪಟ್ಟ ವ್ಯಕ್ತಿ.
ಅವರು ತನ್ನ ಮನೆ ಸಮೀಪ ಇರುವ ತೆಂಗಿನ ಮರಕ್ಕೆ ಕಾಯಿ ಕೀಳಲೆಂದು ಹತ್ತಿದ್ದರು. ಆಯ ತಪ್ಪಿ ಮರದಿಂದ ಕೆಳೆಗೆ ಬಿದ್ದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಿಗೆ ಮೂವರು ಪುತ್ರರು , ಪತ್ನಿ ಇದ್ದಾರೆ.
ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.