ಮೇಲ್ತೆನೆ: ಪದಾಧಿಕಾರಿಗಳ ಆಯ್ಕೆ
Update: 2017-01-08 17:44 IST
ಮಂಗಳೂರು, ಜ.8: ದೇರಳಕಟ್ಟೆಯ ಮೇಲ್ತೆನೆ (ಬ್ಯಾರಿ ಲೇಖಕರು ಮತ್ತು ಕಲಾವಿದರ ಒಕ್ಕೂಟ) ಸಂಘಟನೆಯ ದ್ವಿತೀಯ ವಾರ್ಷಿಕ ಸಭೆಯು ಇತ್ತೀಚೆಗೆ ದೇರಳಕಟ್ಟೆಯಲ್ಲಿ ಜರಗಿತು.
ಅಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಇಸ್ಮತ್ ಫಜೀರ್ ವಾರ್ಷಿಕ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು.
ಮೇಲ್ತೆನೆಯ ಅಧ್ಯಕ್ಷರಾಗಿ ಆಲಿಕುಂಞಿ ಪಾರೆ ಪುನರಾಯ್ಕೆಗೊಂಡರೆ, ಉಪಾಧ್ಯಕ್ಷರಾಗಿ ಇಸ್ಮತ್ ಪಜೀರ್, ಪ್ರಧಾನ ಕಾರ್ಯದರ್ಶಿಯಾಗಿ ಟಿ. ಇಸ್ಮಾಯೀಲ್ ಮಾಸ್ಟರ್, ಜತೆ ಕಾರ್ಯದರ್ಶಿಯಾಗಿ ಬಶೀರ್ ಕಲ್ಕಟ್ಟ, ಕೋಶಾಧಿಕಾರಿಯಾಗಿ ಅನ್ಸಾರ್ ಇನೋಳಿ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಶೀರ್ ಅಹ್ಮದ್ ಕಿನ್ಯ, ಹಂಝ ಮಲಾರ್, ಆರೀಫ್ ಕಲ್ಕಟ್ಟ, ರಫೀಕ್ ಪಾಣೇಲ ಆಯ್ಕೆಯಾದರು.