ಧರ್ಮಸ್ಥಳ ಯಾತ್ರಾರ್ಥಿ ನದಿಗೆ ಬಿದ್ದು ಸಾವು
Update: 2017-01-08 19:26 IST
ಬೆಳ್ತಂಗಡಿ, ಜ.8 : ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ವ್ಯಕ್ತಿಯೋರ್ವ ನೇತ್ರಾವತಿ ನದಿಗೆ ಬಿದ್ದು ಮೃತ ಪಟ್ಟ ಘಟನೆ ಇಂದು ಸಂಭವಿಸಿದೆ.
ಮೃತ ವ್ಯಕ್ತಿ ಹಾಸನದ ಭುವನ ಹಳ್ಳಿ ನಿವಾಸಿ ಪ್ರಸಾದ್ (40) ಎಂಬವರಾಗಿದ್ದಾರೆ.
ಇವರು ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ಇಳಿದ ವೇಳೆ ಕಾಲುಜಾರಿ ನೀರಿಗೆ ಬಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಮೃತ ಪಟ್ಟಿದ್ದಾರೆ.
ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.