ಮುಂದಿನ ವರ್ಷದ ಮೇ.29ಕ್ಕೆ ಪದತ್ಯಾಗ:ಕಿರಣ್ ಬೇಡಿ ಘೋಷಣೆ
Update: 2017-01-08 20:39 IST
ಪುದುಚೇರಿ,ಜ.8: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದೊಂದಿಗೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳ ನಡುವೆಯೇ ಪುದುಚೇರಿಯ ಉಪ ರಾಜ್ಯಪಾಲರಾದ ಕಿರಣ್ ಬೇಡಿ ಅವರು, ಎರಡು ವರ್ಷಗಳ ಅಧಿಕಾರ ಪೂರೈಸಿದ ಬಳಿಕ ಮುಂದಿನ ವರ್ಷದ ಮೇ.29ರಂದು ಪದತ್ಯಾಗ ಮಾಡುವುದಾಗಿ ಘೋಷಿಸಿದ್ದಾರೆ.
ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರು ಹೊರಡಿಸಿದ್ದ ಸುತ್ತೋಲೆಯನ್ನು ಬೇಡಿ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಅವರ ಕಾರ್ಯ ನಿರ್ವಹಣೆಯ ಬಗ್ಗೆ ದೂರಿಕೊಂಡಿರುವ ಕಾಂಗ್ರೆಸ್ ಶಾಸಕರು ಕೇಂದ್ರದ ಮಧ್ಯಪ್ರವೇಶವನ್ನು ಕೋರಿದ ಕೆಲವೇ ದಿನಗಳಲ್ಲಿ ಉಪ ರಾಜ್ಯಪಾಲರ ಈ ಹೇಳಿಕೆ ಹೊರಬಿದ್ದಿದೆ.