ಕುತ್ತಾರು: ಯುವತಿ ಆತ್ಮಹತ್ಯೆ
ಉಳ್ಳಾಲ, ಜ.8: ಯುವತಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರು ಸಂತೋಷನಗರದಲ್ಲಿ ತಡರಾತ್ರಿ ನಡೆದಿದೆ.
ಆನಂದ ಪೂಜಾರಿ ಎಂಬವರ ಪುತ್ರಿ ಮಧುಶ್ರೀ (21) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಶನಿವಾರ ಸಂಜೆ ತಂದೆ ಕೆಲಸಕ್ಕೆ ತೆರಳಿದ್ದು, ತಾಯಿ ಅಂಗಡಿಗೆ ಹೋದ ಸಂದರ್ಭದಲ್ಲಿ ಮನೆಯೊಳಗೆ ಚೂಡಿದಾರಿನ ಶಾಲನ್ನು ಪಕ್ಕಾಸಿಗೆ ಸಿಕ್ಕಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹೆತ್ತವರಿಗೆ ಮಧುಶ್ರೀ ಓರ್ವಳೇ ಪುತ್ರಿಯಾಗಿದ್ದರು. ಮಂಗಳೂರಿನ ಬ್ಯೂಟಿಪಾರ್ಲರಿನಲ್ಲಿ ಕೆಲಸ ಮಾಡುತ್ತಿದ್ದ ಅವರು ಒಂದು ತಿಂಗಳಿನಿಂದ ಕೆಲಸಕ್ಕೂ ತೆರಳದೆ ಮನೆಯಲ್ಲೇ ಉಳಿದುಕೊಂಡಿದ್ದರು. ಆತ್ಮಹತ್ಯೆ ನಡೆಸುವ ಮುನ್ನ ಕೈಯಲ್ಲಿ ಸೂರಜ್ ಎಂಬಾತನ ಹೆಸರನ್ನು ಬರೆದಿಟ್ಟುಕೊಂಡಿದ್ದಾರೆ.
ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೊಬೈಲ್ ಕರೆ ಹಾಗೂ ಕೈಯಲ್ಲಿ ಬರೆದಿರುವ ಹೆಸರಿನ ಕುರಿತು ತನಿಖೆ ಆರಂಭಿಸಿದ್ದಾರೆ. ಆದರೆ ಹೆತ್ತವರು ಮಾನಸಿಕ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿರುವುದಾಗಿ ದೂರಿಕೊಂಡಿದ್ದಾರೆ..