×
Ad

ಜಾತಿ-ಧರ್ಮದ ಹೆಸರಲ್ಲಿ ಮತಯಾಚನೆ : ಸುಪ್ರೀಂ ಕೋರ್ಟ್ ಸ್ಪಷ್ಟಿಕರಣ ನೀಡಲಿ: ಜಮಾಅತೆ ಇಸ್ಲಾಮೀ ಆಗ್ರಹ

Update: 2017-01-08 21:52 IST

ಮಂಗಳೂರು, ಜ. 8: ಜಾತಿ ಮತ್ತು ಧರ್ಮವನ್ನು ಆಧಾರವಾಗಿರಿಸಿಕೊಂಡು ಮತಯಾಚನೆ ಸಲ್ಲದು ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನುದ್ದೇಶಿಸಿ ಜಮಾಅತೆ ಇಸ್ಲಾಮಿ ಹಿಂದ್‌ನ ರಾಷ್ಟ್ರಾಧ್ಯಕ್ಷ ಜಲಾಲುದ್ದೀನ್ ಉಮರಿ ಅವರು ಸುಪ್ರೀಂ ಕೋರ್ಟ್ ಜಾತಿ ಮತ್ತು ಧರ್ಮದ ಆಧಾರದಲ್ಲಿ ಮತವನ್ನು ಯಾಚಿಸಬಾರದೆಂದು ಹೇಳುತ್ತದೆಯಾದರೂ ಯಾವುದೇ ರೀತಿಯ ಯುಕ್ತಿಪೂರ್ಣತೆಯನ್ನು ಪ್ರತಿಬಿಂಬಿಸಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಈಗಾಗಲೇ ‘ಹಿಂದೂ ಎಂಬುದು ಧರ್ಮವಲ್ಲ ಜೀವನ ಕ್ರಮ’ ಎಂದು ಆದೇಶಹೊರಡಿಸಿದ್ದು, ಈ ಆದೇಶದಂತೆ ಕೆಲವು ರಾಜಕೀಯ ಪಕ್ಷಗಳು ಜೀವನ ಕ್ರಮವೆಂಬ ಹೆಸರಲ್ಲಿ ಮತಯಾಚನೆ ಮಾಡಬಹುದು. ಆದರೇ ಇದು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ವಿವಿಧ ರೀತಿಯ ಜೀವನ ಕ್ರಮವನ್ನು ಅನುಸರಿಸುವ ಜನರು ಭಾರತದಲ್ಲಿರುವಾಗ ಈ ಆದೇಶವು ಭಾವೈಕ್ಯತೆಗೆ ಧಕ್ಕೆ ತರುತ್ತದೆ. ಆದ್ದರಿಂದ ಸರ್ವೋಚ್ಚ ನ್ಯಾಯಾಲಯವು ಮತಯಾಚನೆಯಲ್ಲಿ ಜಾತಿ ಧರ್ಮದ ಬಳಕೆ ಸಲ್ಲದೆಂಬುದರ ಕುರಿತು ಸರಿಯಾದ ಸ್ಪಷ್ಟೀಕರಣ ನೀಡಬೇಕೆಂದು ಅವರು ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News