×
Ad

ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ

Update: 2017-01-08 22:55 IST

ಉಡುಪಿ, ಜ.8: ಉಡುಪಿ ರಂಗಭೂಮಿಯ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ದೊಂದಿಗೆ ಆಯೋಜಿಸಲಾದ 37ನೆ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಬಹು ಮಾನ ವಿತರಣಾ ಸಮಾರಂಭವು ರವಿವಾರ ಕಾಲೇಜಿನ ಮುದ್ದಣ ಮಂಟಪ ದಲ್ಲಿ ಜರಗಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾರಿ ಅವರಿಗೆ ‘ರಂಗ ಕಲಾನಿಧಿ’ ರಂಗಭೂಮಿ ಪುರಸ್ಕಾರವನ್ನು ಪ್ರದಾನ ಮಾಡ ಲಾಯಿತು. ಕಲೆ ಎಂಬುದು ಏನನ್ನು ಅಪೇಕ್ಷೆ ಪಡದೆ ಕೇವಲ ತೃಪ್ತಿಗಾಗಿ ಇರುವುದು. ಆದರೆ ಇಂದು ಹಣವಿಲ್ಲದೆ ಏನು ಮಾಡಲು ಆಗಲ್ಲ. ಈ ಮೂಲಕ ಕಲೆಯ ಸೃಷ್ಠಿಯ ನೆಲೆ ಬದಲಾವಣೆ ಕಾಣುತ್ತಿರುವುದು ದುರಂತ ಎಂದು ಗೋಪಾಲಕೃಷ್ಣ ನಾರಿ ತಿಳಿಸಿದರು.

ರಂಗಭೂಮಿಯ ‘ಕಲಾಂಜಲಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ನಾ.ದಾಮೋದರ್ ಶೆಟ್ಟಿ ಮಾತನಾಡಿ, ಪ್ರಸ್ತುತ ಹೆಚ್ಚು ಹೆಚ್ಚು ನಾಟಕಗಳು ಪ್ರದರ್ಶನಗೊಳ್ಳು ತ್ತಿರುವುದರಿಂದ ಈ ದಶಕದಲ್ಲಿ ಒಳ್ಳೆಯ ಬೆಳೆ ಬಂದಿದೆ. ಈ ಮೂಲಕ ಮತ್ತೆ ರಂಗಭೂಮಿ ಬೆಳೆಯುತ್ತಿರುವುದನ್ನು ನಾವು ನೋಡಬಹುದು ಎಂದರು.

ಅಧ್ಯಕ್ಷತೆಯನ್ನು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ವಹಿಸಿದ್ದರು.

ಮಂಗಳೂರು ಎಸ್‌ಇಝೆಡ್ ನಿವೃತ್ತ ಜನರಲ್ ಮೆನೇಜರ್ ಎಸ್.ಟಿ.ಕರ್ಕೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಉದ್ಯಮಿ ಪ್ರಭಾಕರ ಭಟ್ ಮುಖ್ಯ ಅತಿಥಿಗಳಾಗಿದ್ದರು.

ರಂಗಭೂಮಿ ಉಪಾಧ್ಯಕ್ಷ ಯು.ಉಪೇಂದ್ರ, ವಾಸುದೇವ ರಾವ್ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಡಾ.ಎಚ್.ಶಾಂತರಾಮ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಗಿರೀಶ್ ತಂತ್ರಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News