×
Ad

ಅಮರ ಸಿಂಗ್‌ಗೆ ಮತ್ತೆ ‘ಝಡ್’ ವರ್ಗದ ಭದ್ರತೆ

Update: 2017-01-08 23:11 IST

ಹೊಸದಿಲ್ಲಿ,ಜ.8: ಇತ್ತೀಚಿನ ಚಟುವಟಿಕೆಗಳ ಹಿನ್ನೆಲೆಯಲ್ಲಿ ಬೆದರಿಕೆಗಳು ವ್ಯಕ್ತವಾಗಿರುವುದರಿಂದ ರಾಜ್ಯಸಭಾ ಸದಸ್ಯ ಅಮರ ಸಿಂಗ್ ಅವರಿಗೆ ಕೇಂದ್ರ ಸರಕಾರವು ಸಿಐಎಸ್‌ಎಫ್ ಕಮಾಂಡೊಗಳ ‘ಝಡ್ ’ವರ್ಗದ ಭದ್ರತೆಯನ್ನು ಒದಗಿಸಿ ಶನಿವಾರ ರಾತ್ರಿ ಆದೇಶವನ್ನು ಹೊರಡಿಸಿದೆ.

ಎಸ್‌ಪಿ ನಾಯಕ ಮುಲಾಯಂ ಸಿಂಗ್ ಯಾದವ ಅವರ ನಿಕಟವರ್ತಿಯಾಗಿರುವ ಸಿಂಗ್‌ಗೆ ಅವರು ಪ್ರತಿಬಾರಿ ಉತ್ತರ ಪ್ರದೇಶದಲ್ಲಿ ಸಂಚರಿಸುವಾಗಲೂ ಕನಿಷ್ಠ ಎರಡು ಡಝನ್ ಸಶಸ್ತ್ರ ಸಿಐಎಸ್‌ಎಫ್ ಕಮಾಂಡೊಗಳು ಭದ್ರತೆಯನ್ನು ಒದಗಿಸುತ್ತಾರೆ. ಅವರು ದಿಲ್ಲಿಯಲ್ಲಿರುವಾಗ ದಿಲ್ಲಿ ಪೊಲೀಸ್‌ನ ಸಣ್ಣ ತಂಡವೊಂದು ಅವರಿಗೆ ಭದ್ರತೆಯನ್ನು ಒದಗಿಸಲಿದೆ ಎನ್ನಲಾಗಿದೆ. ಈ ಹಿಂದೆ 2008ರಿಂದ 2016ರ ಮಧ್ಯಭಾಗದವರೆಗೆ ಸಿಂಗ್ ಅವರು ಸಿಐಎಸ್‌ಎಫ್ ಭದ್ರತೆಯನ್ನು ಹೊಂದಿದ್ದರು. ಬಳಿಕ ಕೇಂದ್ರ ಗೃಹ ಸಚಿವಾಲಯವು ಈ ಹೊಣೆಗಾರಿಕೆಯನ್ನು ಉತ್ತರ ಪ್ರದೇಶ ಪೊಲೀಸರಿಗೆ ವರ್ಗಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News