ನೋಟು ರದ್ದತಿಯಿಂದಾಗಿ ಜಿಡಿಪಿಯ ಮೇಲೆ ಅಲ್ಪಾವಧಿಗೆ ‘ಮಹತ್ವದ ಪರಿಣಾಮ’

Update: 2017-01-08 17:45 GMT

ಹೊಸದಿಲ್ಲಿ,ಜ.8: ಉದ್ಯಮ ಕ್ಷೇತ್ರವು ಬೃಹತ್ ನಗದು ಕೊರತೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ನೋಟು ಅಮಾನ್ಯ ಕ್ರಮವು ಸದ್ಯೋಭವಿಷ್ಯದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ದ ಮೇಲೆ ಮಹತ್ವದ ಪರಿಣಾಮವನ್ನು ಬೀರಲಿದೆ,ಆದರೆ ಒಮ್ಮೆ ಪರಿವರ್ತನೆ ಹಂತ ಪೂರ್ಣಗೊಂಡಿತೆಂದರೆ ಬೆಳವಣಿಗೆಯ ವೇಗ ಹೆಚ್ಚಲಿದೆ ಎಂದು ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ವರದಿಯು ಹೇಳಿದೆ.

ಚೇಂಬರ್ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸುಮಾರು ಶೇ.81ರಷ್ಟು ಆರ್ಥಿಕ ತಜ್ಞರು ನೋಟು ರದ್ದತಿಯು ಅಲ್ಪಾವಧಿಯಲ್ಲಿ ಭಾರತದ ಆರ್ಥಿಕತೆಯ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ನೋಟು ರದ್ದತಿಯಿಂದಾಗಲಿರುವ ಲಾಭಗಳು ದೀರ್ಘಾವಧಿಯಲ್ಲಿ ದೇಶದ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ನೆರವಾಗಲಿವೆ ಎಂದು ಅವರು ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ನಡೆಸಲಾದ ಸಮೀಕ್ಷೆಯು 50ಕ್ಕೂ ಅಧಿಕ ಆರ್ಥಿಕ ತಜ್ಞರು ಮತ್ತು ವಿಶ್ಲೇಷಕರು,700 ಉದ್ಯಮ ಸಂಸ್ಥೆಗಳು ಮತ್ತು 2000 ಜನರ ಅಭಿಪ್ರಾಯಗಳನ್ನು ಆಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News