×
Ad

ಅನ್‌ಲೈನ್‌ನಲ್ಲಿ ಪಿಂಚಣಿ ಪ್ರಕರಣಗಳ ಪರಿಷ್ಕರಣೆ ಕಡ್ಡಾಯ

Update: 2017-01-09 21:55 IST

ಹೊಸದಿಲ್ಲಿ,ಜ.9: ವಿಳಂಬವನ್ನು ತಡೆಗಟ್ಟುವ ಮತ್ತು ಹೆಚ್ಚಿನ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಎಲ್ಲ ಪಿಂಚಣಿ ಸಂಬಂಧಿ ಪ್ರಕರಣಗಳನ್ನು ಕಡ್ಡಾಯವಾಗಿ ಆನ್‌ಲೈನ್ ವ್ಯವಸ್ಥೆಯ ಮೂಲಕ ಪರಿಷ್ಕರಿಸುವಂತೆ ಕೇಂದ್ರ ಸರಕಾರವು ತನ್ನ ಎಲ್ಲ ಇಲಾಖೆಗಳಿಗೆ ಸೂಚಿಸಿದೆ.

ಆನ್‌ಲೈನ್ ಪರಿಷ್ಕರಣೆಯಿಂದ ಉದ್ಯೋಗಿಗಳಿಗೆ ನಿವೃತ್ತಿ ಸೌಲಭ್ಯಗಳು ಸಕಾಲದಲ್ಲಿ ದೊರೆಯುವಂತಾಗುತ್ತದೆ.

ಪಿಂಚಣಿ ಪ್ರಕರಣಗಳು ಆನಲೈನ್ ಮೂಲಕವೇ ಪರಿಷ್ಕರಣೆಗೊಳ್ಳುವುದನ್ನು ಖಚಿತ ಪಡಿಸುವಂತೆ ಸಿಬ್ಬಂದಿ,ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯವು ಎಲ್ಲ ಕೇಂದ್ರ ಸರಕಾರಿ ಇಲಾಖೆಗಳಿಗೆ ನಿರ್ದೇಶ ನೀಡಿದೆ.

ಉದ್ಯೋಗಿಗಳಿಗೆ ನಿವೃತ್ತಿ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಳಂಬವನ್ನು ತಡೆಯಲು ‘ಭವಿಷ್ಯ’ ಹೆಸರಿನಲ್ಲಿ ನೂತನ ಆನ್‌ಲೈನ್ ಪಿಂಚಣಿ ಮಂಜೂರಿ ಮತ್ತು ಪಾವತಿಯ ಮೇಲೆ ನಿಗಾ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿರುವ ಸಚಿವಾಲಯವು, ನಿವೃತ್ತ ಉದ್ಯೋಗಿಗಳ ಎಲ್ಲ ಪಿಂಚಣಿ ಸಂಬಂಧಿ ಪ್ರಕರಣಗಳನ್ನು 2017,ಜನವರಿಯಿಂದ ಆನ್‌ಲೈನ್‌ನಲ್ಲೇ ಸಲ್ಲಿಸಬೇಕು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News