ಪ್ಲಾಸಿಕ್ ನಿಷೇಧ: ಕೇಂದ್ರ,ದಿಲ್ಲಿ ಸರಕಾರಕ್ಕೆ ಎನ್‌ಜಿಟಿ ನೋಟಿಸ್

Update: 2017-01-09 16:27 GMT

ಹೊಸದಿಲ್ಲಿ,ಜ.9:ಪ್ಲಾಸ್ಟಿಕ್ ಬ್ಯಾಗ್‌ಗಳ ತಯಾರಿಕೆ,ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿರುವ ದಿಲ್ಲಿ ಸರಕಾರದ 2012ರ ಅಧಿಸೂಚನೆಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ದಲ್ಲಿ ಪ್ರಶ್ನಿಸಲಾಗಿದೆ. ಈ ಅರ್ಜಿಗಳಿಗೆ ಉತ್ತರಿಸುವಂತೆ ಎನ್‌ಜಿಟಿಯು ಸೋಮವಾರ ಕೇಂದ್ರ,ದಿಲ್ಲಿ ಸರಕಾರ ಮತ್ತು ಇತರರಿಗೆ ನೋಟಿಸುಗಳನ್ನು ಹೊರಡಿಸಿದೆ.

ಮುಂದಿನ ವಿಚಾರಣಾ ದಿನಾಂಕವಾದ ಫೆ.13ರ ಮೊದಲು ಉತ್ತರಗಳನ್ನು ಸಲ್ಲಿಸುವಂತೆ ಎನ್‌ಜಿಟಿ ಅಧ್ಯಕ್ಷ ನ್ಯಾ.ಸ್ವತಂತರ್ ಕುಮಾರ್ ನೇತೃತ್ವದ ಪೀಠವು ತಿಳಿಸಿತು.

ಅಖಿಲ ಭಾರತೀಯ ಪ್ಲಾಸ್ಟಿಕ್ ಕೈಗಾರಿಕೆಗಳ ಸಂಘ ಮತ್ತು ಇತರರು ದಿಲ್ಲಿ ಸರಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News