ಬ್ಯಾರೀಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ
Update: 2017-01-09 22:06 IST
ಕುಂದಾಪುರ , ಜ.9 : ಬ್ಯಾರೀಸ್ ಕಾಲೇಜಿನ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಮೊಹಮ್ಮದ್ ಸುಲ್ತಾನ್ ಹುದೈಫ್, ಮೊಹಮ್ಮದ್ ಹಯಾಜ್ ( ರಾಷ್ಟ್ರ ಮಟ್ಟ) , ಮೊಹಮ್ಮದ್ ಮುಕ್ತಾರ್, ತನ್ಝೀಮ್, ರಾಶೀದ್, ಆಪ್ರೀದ್, ( ರಾಜ್ಯಮಟ್ಟದ ವಾಲಿಬಾಲ್ ) ಮಹಮ್ಮದ್ ಫಾಹಾರ್ ( ರಾಜ್ಯಮಟ್ಟದ ಕುಸ್ತಿ ) ಇವರನ್ನು ಸನ್ಮಾನಿಸಲಾಯಿತು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಬಿಹೈವ್ ಕನ್ವೆಷನ್ ಹಾಲ್‌ನಲ್ಲಿ ನಡೆದ ಅರಿವು ವಿದ್ಯಾಭ್ಯಾಸದ ಮಾಹಿತಿ ಕಾರ್ಯ್ರಮದಲ್ಲಿ ಗೌರವ ಉಪಸ್ಥಿತರಿದ್ದ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷರಾದ ಎಂ ಎ ಗಫೂರ್‌ರವರು ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮೂದ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಶಮೀರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೀತೇಶ್ ಶೆಟ್ಟಿ ಗುಲ್ವಾಡಿ, ಇಲಿಯಾಸ್, ಜ್ ಸನ್ನಿ ಡಿಸೋಜಾ ಉಪಸ್ಥಿತರಿದ್ದರು.