×
Ad

ಕಾಸರಗೋಡು : ಕಾಂಗ್ರೆಸ್ ಸಮಾವೇಶ

Update: 2017-01-09 23:50 IST

ಕಾಸರಗೋಡು, ಜ.9  : ನೋಟು ಅಮಾನ್ಯ ಬಳಿಕ ದೇಶವೇ ನಾಶದಂಚಿಗೆ ತಳ್ಳಲ್ಪಟ್ಟಿದೆ. ಆರ್ಥಿಕ ವ್ಯವಸ್ಥೆಗಳು ಏರುಪೇರಾಗಿದೆ. ಸುಮಾರು 20ಕೋಟಿ ಮಂದಿ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ ಎಂದು ಎಐಸಿಸಿ ಸಂಯೋಜಕ ಯು.ಆರ್.ಸಭಾಪತಿ ಹೇಳಿದರು.

ಅವರು ಸೋಮವಾರ ನಗರದ ಸ್ಪೀಡ್ ವೇ ಇನ್ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು 

ಅಧಿಕಾರಕ್ಕೆ ಬರುವ ಮೊದಲು ಕಪ್ಪು ಹಣ ವಾಪಾಸು ಪಡೆಯುವ  ಪೊಳ್ಳು  ಭರವಸೆ ನೀಡಿ ಅ ಧಿಕಾ ಕಾರಕ್ಕೆ ಬಂದ ಬಳಿಕ ಈ ತನಕ ಹಣವನ್ನು ತರಲು ಸಾಧ್ಯವಾಗಲಿಲ್ಲ.  ದೇಶದಲ್ಲಿ ನಿತ್ಯೋಪಯೋಗಿ ವಸ್ತುಗಳಿಗೆ ಬೆಲೆ ಇನ್ನೂ ಇಳಿಕೆಯಾಗಲಿಲ್ಲ. ಇವುಗಳೆಲ್ಲದರ  ವಿರುದ್ಧ ರಾಹುಲ್ ಗಾಂ ನೇತೃತ್ವದಲ್ಲಿ ದೇಶಾದ್ಯಂತ ಕ್ರಾಂತಿಕಾರಿ ಹೋರಾಟ ನಡೆಸಲು ತೀರ್ಮಾನಿಸಿರುವುದಾಗಿ ಅವರು ಹೇಳಿದರು. ಪ್ರಧಾನ ಮಂತ್ರಿ ಮೋದಿಗೆ ಈತನಕ  ರಾಹುಲ್ ಗಾಂ ಕೇಳಿದ ಎಂಟು ಪ್ರಶ್ನೆಗಳಿಗೆ ಈ ತನಕ ಉತ್ತರ ನೀಡಲು ಸಾಧ್ಯವಾಗಲಿಲ್ಲ ಎಂದು ಲೇವಡಿ ಮಾಡಿದರು.

ಯಾವಗ ಚುನಾವಣೆ ಘೋಷಣೆಯಾಗುತ್ತದೋ ತಕ್ಷಣ ಹಿಂದೂ ಸಮಾಜೋತ್ಸವಗಳು  ಆರಂಭಗೊಳ್ಳುತ್ತದೆ. ಆ ಮೂಲಕ ದೇಶದಲ್ಲಿ ಬಿಜೆಪಿ-ಆರೆಸ್ಸೆಸ್ ವಿಷ ಬೀಜ ಬಿತ್ತುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಕೀಂ ಕುನ್ನಿಲ್ ಅಧ್ಯಕ್ಷತೆ ವಹಿಸಿದರು.  

ಕಾಂಗ್ರೆಸ್ ಮುಖಂಡರಾದ .ರಾಮಕೃಷ್ಣನ್, ಮಾಜಿ ಶಾಸಕ ಕೆ.ಪಿ.ಕುಂಞ ಕಣ್ಣನ್, ಯುಡಿಎಫ್ ಸಂಚಾಲಕ ಪಿ.ಗಂಗಾಧರನ್ ನಾಯರ್, ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಆಶ್ರಫಾಲಿ, ಬಾಲಕೃಷ್ಣ ವೊರ್ಕುಡ್ಲು ಮೊದಲಾದವರು ಉಪಸ್ಥಿತರಿದ್ದರು.

ತ್ರೋ ಬಾಲ್  ಚಾ೦ಪಿಯನ್ ಶಿಪ್ ಗೆದ್ದ  ಯಶ್ಮಿತಾ ಳನ್ನು ಈ ಸಂದರ್ಭದಲ್ಲಿ   ಸಭಾಪತಿಯವರು  ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News