ತಾಯಿ-ಮಗ ನಾಪತ್ತೆ

Update: 2017-01-09 18:27 GMT

ಕೋಟ, ಜ.9: ತಾಯಿ ಮತ್ತು ಮಗ ನಾಪ್ತೆಯಾಗಿರುವ ಘಟನೆ ಜ.5ರಂದು ಬೇಳೂರು ಗ್ರಾಮದ ದೇಲಟ್ಟು ಎಂಬಲ್ಲಿ ನಡೆದಿದೆ.

ನಾಪತ್ತೆಯಾದವರನ್ನು ದೇಲಟ್ಟು ನಿವಾಸಿ ಉದಯ ಪೂಜಾರಿ ಎಂಬವರ ಪತ್ನಿ ಕಿರಣಾ(29) ಹಾಗೂ ಮಗ ಗೌರವ(8) ಎಂದು ಗುರುತಿಸಲಾಗಿದೆ. ಜ.4ರಂದು ಮುಂಬೈಯಲ್ಲಿರುವ ಉದಯ ಪೂಜಾರಿಗೆ ಪತ್ನಿ ಕಿರಣಾ ಕರೆ ಮಾಡಿ ಮುಂಬೈಗೆ ಬರುವುದಾಗಿ ಹೇಳಿದ್ದರು ಎನ್ನಲಾಗಿದೆ. ಆದರೆ ಜ.5ರಂದು ಆಕೆಯ ಮೊಬೈಲ್ ಸ್ವಿಚ್ ಆ್ ಆಗಿದ್ದು, ಜ.7ರಂದು ಉದಯ ಪೂಜಾರಿ ಮನೆಗೆ ಬಂದು ನೋಡುವಾಗ ಅವರ ಪತ್ನಿ ಮತ್ತು ಮಗ ನಾಪತ್ತೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News