ಬೆಂಕಿ ಆಕಸ್ಮಿಕ: ಗಾಯಾಳು ಸಾವು
Update: 2017-01-09 23:58 IST
ಕಾರ್ಕಳ, ಜ.9: ಬೆಂಕಿ ಆಕಸ್ಮಿಕದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೈಲೂರು ಸಮೀಪದ ಕೌಡೂರು ನಿವಾಸಿ ಲಲಿತಾ(80) ಎಂಬವರು ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾರೆ.
ಡಿ.27ರಂದು ರಾತ್ರಿ ದೇವರ ಕೋಣೆಯಲ್ಲಿ ನೆಲದ ಮೇಲೆ ಇಟ್ಟಿದ್ದ ಕಾಲು ದೀಪದ ಬೆಂಕಿ ಆಕಸ್ಮಿಕವಾಗಿ ಸೀರೆಗೆ ತಗಲಿದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಜ.8ರಂದು ರಾತ್ರಿ 8:20ಕ್ಕೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.